
ಪುತ್ತೂರು ತಾಲೂಕಿನ ಕೆಮ್ಮಾಯಿಯಲ್ಲಿ ಅಲ್ ಹಾಜಿ ಸಯ್ಯದ್ ಅಬೂಬಕ್ಕರ್ ಅಲ್ ಹಾದಿ ತಂಙಳ್ ಅವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಬುಸ್ತಾನುಲ್ ಬಾದುಷಾ ಮಜ್ಲಿಸ್ ಕೆಮ್ಮಾಯಿ ಇದರ 4ನೇ ವಾರ್ಷಿಕೋತ್ಸವದ ಪ್ರಯುಕ್ತ ಜಲಾಲಿಯ್ಯ ದ್ಸಿಖ್ರ್ ಮಜ್ಲಿಸ್ ಕಾರ್ಯಕ್ರಮವು ಜನವರಿ 11ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ನೋಟೀಸ್ ಬಿಡುಗಡೆ ಸಮಾರಂಭವನ್ನು ಅಲ್ ಹಾಜಿ ಸಯ್ಯದ್ ಅಬೂಬಕ್ಕರ್ ಅಲ್ ಹಾದಿ ತಂಙಳ್ ಅವರು ನೆರವೇರಿಸಿದರು. ಈ ಸಂದರ್ಭ ಮಜ್ಲಿಸ್ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ಚರ್ಚಿಸಲಾಯಿತು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಸಮಿತಿ ಮನವಿ ಮಾಡಿದೆ.






