ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಮಗು ಮೃತಪಟ್ಟ ದಾರುಣ ಘಟನೆ ನೆ.ಮುಳ್ಳೂರು ಗ್ರಾಮದ ಗಾಳಿಮುಖ ಗೋಳಿತ್ತಡಿ ಎಂಬಲ್ಲಿ ಡಿ.29ರಂದು ಸಂಜೆ ನಡೆದಿದೆ.

ಗೋಳಿತ್ತಡಿ ನಿವಾಸಿ ಸಿಂಸಾರ್ ಎಂಬವರ ಮೂರೂವರೆ ವರ್ಷದ ಪುತ್ರ ಝನು ಮೃತ ಮಗು.

ಮಗು ಆಟವಾಡುತ್ತಾ ಮನೆಯ ಅರ್ಥ್ ಗೆ ಸಂಬಂಧಿಸಿದ ತಂತಿಯನ್ನು ಮುಟ್ಟಿದ್ದು ಈ ವೇಳೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮಗುವನ್ನು ರಕ್ಷಿಸಲು ಬಂದ ಮಗುವಿನ ಅಜ್ಜ ಶಾಫಿ ಅವರಿಗೆ ವಿದ್ಯುತ್ ಶಾಕ್ ಹೊಡೆದು ಗಂಭೀರ ಸ್ಥಿತಿಯಲ್ಲಿ ಚೆರ್ಕಳದ ಆಸ್ಪತ್ರೆಗೆ ದಾಖಲಾಗಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!