
ಮಿ ರ್ಜಾಪುರ ಜಿಲ್ಲೆಯ ತೆದ್ವಾ ಸಾಹಸಪುರದ ಹನುಮಾನ್ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಈ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ
ಕಳ್ಳ ದೇವಸ್ಥಾನದಲ್ಲಿನ ವಿಗ್ರಹದ ಮುಂದೆ ಕುಳಿತು 15 ನಿಮಿಷಗಳ ಕಾಲ ಪೂಜೆ ಮಾಡಿ ನಂತರ ಕಿರೀಟವನ್ನು ಕದಿಯುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.
ಕಿರೀಟವನ್ನು ಕದಿಯಲು ಅವನು ಒಳಗೆ ಹೋದಾಗ ಅದೇ ಸಮಯದಲ್ಲಿ ಇನ್ನೊಬ್ಬ ವ್ಯಕ್ತಿ ಪೂಜೆಗೆ ಬರುತ್ತಾನೆ. ಈ ಆರೋಪಿಯು ಅಲ್ಲಿಯೇ ತಲೆಬಾಗಿ ಕುಳಿತುಕೊಳ್ಳುತ್ತಾನೆ. ಆ ವ್ಯಕ್ತಿಯು ಹೋದ ಬಳಿಕ ಅವನು ಕಿರೀಟವನ್ನು ಕದ್ದು ತೆಗೆದುಕೊಂಡು ಹೋಗುತ್ತಾನೆ.
ಇದರಲ್ಲಿ ಕಳ್ಳನು ಮೊದಲು ಕುಳಿತು ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು. ಇದಾದ ನಂತರ ವಿಗ್ರಹದ ಬಳಿ ಹೋಗಿ ಹನುಮಂಜಿಯ ಬೆಳ್ಳಿಯ ಕಿರೀಟವನ್ನು ಕದಿಯುತ್ತಾನೆ
ದೇವಸ್ಥಾನದ ಅರ್ಚಕರಾದ ದೀಪಕ್ ಮತ್ತು ಅಶೋಕ್ ದುಬೆ ಅವರು ಶುಕ್ರವಾರ ಪೂಜೆ ಮುಗಿಸಿ ಮನೆಗೆ ಹೋಗಿದ್ದರು , ಮಧ್ಯಾಹ್ನ ದೇವಸ್ಥಾನದ ಬಾಗಿಲು ಮುಚ್ಚಲು ಬಂದಾಗ ಅರ್ಚಕರು ಕಿರೀಟ ಕಾಣೆಯಾದ್ದು ದೇವಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ಕಿರೀಟವನ್ನು ಕಳವು ಮಾಡಿರುವುದು ಪತ್ತೆಯಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಳ್ಳನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೀಡಿಯೊವನ್ನು @ManishPDA ಎಂಬ ಹೆಸರಿನ ಎಕ್ಸ್ ಬಳಕೆದಾರ ಹಂಚಿಕೊಂಡಿದ್ದಾರೆ.






