ಪುತ್ತೂರು: ಇಲ್ಲಿನ ಮುಖ್ಯರಸ್ತೆಯ ಬದಿಯಲ್ಲೇ ಇದ್ದ ಪೈಪ್ ನೊಳಗಡೆ ಬುರ್ಖಾಧಾರಿ ಮಹಿಳೆಯ ಕಾಲು ಸಿಲುಕಿ ಪೇಚಾಟಕ್ಕೆ ಸಿಲುಕಿದ ಪ್ರಸಂಗ ಸೋಮವಾರ ಸಂಜೆ ನಡೆಯಿತು.
ಪುತ್ತೂರು ಪೇಟೆಯ ಹೂವಿನ ಮಾರ್ಕೆಟ್ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆ ಈ ಘಟನೆಗೆ ಸಾಕ್ಷಿಯಾಯಿತು.
ಮುಖ್ಯರಸ್ತೆಯಿಂದ ಕಾಲನಿ ರಸ್ತೆಗೆ ತಿರುಗುವ ಪ್ರದೇಶದಲ್ಲಿ ಚರಂಡಿಗೆ ಪೈಪ್ ಲೈನ್ ಹಾಕಲಾಗಿತ್ತು. ಈ ಪೈಪ್ ಲೈನ್ ಕಳೆದ ಕೆಲ ಸಮಯಗಳಿಂದ ತುಂಡಾಗಿದ್ದು, ಸಂಬಂಧಪಟ್ಟವರನ್ನು ಎಚ್ಚರಿಸುವ ಪ್ರಯತ್ನ ನಡೆಸಲಾಗಿತ್ತು. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಯಾರೋ ಬಡಪಾಯಿಗಳು ಸಂತ್ರಸ್ತರಾಗುವುದನ್ನೇ ಕಾದು ಕುಳಿತಂತಿತ್ತು. ಇದೀಗ ಅಧಿಕಾರಿಗಳ ಆಶಯ ಯಶ ಕಂಡಿದೆ.
ಸೋಮವಾರ ಸಂಜೆ ಪುತ್ತೂರಿಗೆ ಆಗಮಿಸಿದ್ದ ಬುರ್ಖಾಧಾರಿ ಮಹಿಳೆ, ಅರಿವಿಲ್ಲದೇ ಪೈಪ್ ಲೈನೊಳಗಡೆ ಕಾಲು ಹಾಕಿದ್ದಾರೆ. ನೇತಾಡಿಕೊಂಡಿದ್ದ ಪೈಪ್ ಗಳಲ್ಲೊಂದು ತುಂಡಾಗಿ, ಮಹಿಳೆಯ ಕಾಲು ಸಿಲುಕಿಕೊಂಡಿದೆ.
ಸ್ಥಳೀಯರು ತಕ್ಷಣವೇ ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ. .