ಹೊಸ ವರ್ಷಕ್ಕೆ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಬಂದಿದ್ದು, ನಿನ್ನೆ ರಾಜ್ಯದಲ್ಲಿ ಭರ್ಜರಿ 308 ಕೋಟಿ ಮದ್ಯ ಮಾರಾಟವಾಗಿದೆ

ಡಿ.31 ರ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೇವಲ ಅರ್ಧ ದಿನದ ಅವಧಿಯಲ್ಲಿ ಬರೋಬ್ಬರಿ 308 ಕೋಟಿ ರೂ ಮದ್ಯ ಮಾರಾಟವಾಗಿದೆ.

ಈ ಮೂಲಕ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಹರಿದು ಬಂದಿದೆ.

2024 ರ ಡಿಸೆಂಬರ್ 31 ರಂದು 7305 ಮದ್ಯ ಮಾರಾಟಗಾರರು ಕೆಎಸ್ ಬಿಸಿಎಲ್ ನಿಂದ ಮದ್ಯ ಖರೀದಿಸಿದ್ದಾರೆ.
2023 ರ ಡಿಸೆಂಬರ್ 31 ರಂದು 193 ಕೋಟಿ ಮದ್ಯ ಮಾರಾಟ ಆಗಿತ್ತು. ನಿನ್ನೆ ರಾಜ್ಯದಲ್ಲಿ ಭರ್ಜರಿ 308 ಕೋಟಿ ಮದ್ಯ ಮಾರಾಟವಾಗಿದೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. 2024ಕ್ಕೆ ಗುಡ್ ಬೈ ಹೇಳಿ 2025 ಅನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಎಲ್ಲೆಲ್ಲೂ ಯುವಕರು ಸೇರಿದಂತೆ ಎಲ್ಲಾ ವರ್ಗದ ಜನ ಸಂಭ್ರಮಾಚರಣೆ ನಡೆಸಿದ್ದಾರೆ.ಬೆಂಗಳೂರಿನ ಪ್ರಮುಖ ರಸ್ತೆಗಳು ಯುವಕ ಯುವತಿಯರು ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದರು. ಕೆಲವರಂತೂ ಮಿತಿಯಿಲ್ಲದೇ ಕುಡಿದು ರಸ್ತೆಯಲ್ಲೇ ಟೈಟಾಗಿ ಬಿದ್ದಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!