ಮಂಗಳೂರು : SDPI ಪಕ್ಷದ  ಮಹಿಳಾ ಘಟಕವಾದ ವಿಮೆನ್ ಇಂಡಿಯಾ ಮೂವ್ಮೆಂಟ್ ಇದರ  ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಯಾಗಿ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯೆಯಾದ  ನೌರೀನ್ ಆಲಂಪಾಡಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪುತ್ತೂರಿನ
ಝಾಹಿದಾ ಸಾಗರ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಪಾಧ್ಯಕ್ಷೆ ಯಾಗಿ ಝಹನ ಬಂಟ್ವಾಳ,  ಕಾರ್ಯದರ್ಶಿಯಾಗಿ  ಝೈನಬ  ಕಾವಳಕಟ್ಟೆ ,ಕೋಶಾಧಿಕಾರಿಯಾಗಿ ಫಾಹಿನ ಉಪ್ಪಿನಂಗಡಿ ಹಾಗೂ ಸಮಿತಿ ಸದಸ್ಯರುಗಳಾಗಿ ಶಿನೀರ ಮತ್ತು ಮರಿಯಮ್ಮ ಟಿ ಎಸ್ ಆಯ್ಕೆಯಾಗಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ಜನವರಿ ಏಳರಂದು ನಡೆದ SDPI ಪಕ್ಷದ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ,
ಪಕ್ಷವನ್ನು ಆಡಳಿತಾತ್ಮಕ ಸುಲಭ ನಿರ್ವಹಣೆಯ ಉದ್ದೇಶದಿಂದ ಕಂದಾಯ ಜಿಲ್ಲೆಯನ್ನು ವಿಭಜಿಸಿ ಪಕ್ಷದ ಮಂಗಳೂರು ಗ್ರಾಮಾಂತರ ಮತ್ತು ಮಂಗಳೂರು ನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಅದೇ ಪ್ರಕಾರ ಪಕ್ಷದ ಮಹಿಳಾ ಘಟಕವನ್ನು ಎರಡಾಗಿ ವಿಂಗಡಿಸಿ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಕ್ಷೇತ್ರಗಳನ್ನು ಒಳಗೊಂಡ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ  ರಚಿಸಲಾಗಿದೆ, ವಿಮ್ ರಾಜ್ಯಾಧ್ಯಕ್ಷೆ ನಸೀಮಾ ಜೋಕಟ್ಟೆ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು.

Leave a Reply

Your email address will not be published. Required fields are marked *

Join WhatsApp Group
error: Content is protected !!