
ಹಿಂದೆಂದೂ ಕಂಡು ಕೇಳರಿಯದ ಕಾಡ್ಗಿಚ್ಚು ಅಮೆರಿಕವನ್ನ ಅಕ್ಷರಶಃ ಬೂದಿ ಮಾಡಿದೆ. ರಣಭೀಕರ ಅಗ್ನಿ ದುರಂತಕ್ಕೆ 13 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿಯ ಕೆನ್ನಾಲಿಗೆ ದುರಂತಕ್ಕೆ ಹಲವು ಮನೆಗಳು ಸುಟ್ಟು ನಾಶವಾಗಿದೆ.
ಸತತ 4 ದಿನಗಳಿಂದ ಬೆಂಕಿಯಲ್ಲಿ ಬೆಂದಿರುವ ಲಾಸ್ ಏಂಜಲೀಸ್ ಬೆಂಕಿ ಶನಿವಾರ ಮತ್ತಷ್ಟು ವ್ಯಾಪಿಸಿದ್ದು ಹೊಸದಾಗಿ ವೆಸ್ಟ್ ಹಿಲ್ಸ್ ಎಂಬಲ್ಲಿ ಕಾಣಿಸಿಕೊಂಡಿದೆ
ಒಟ್ಟಾರೆ ಬೆಂಕಿಯಿಂದ ಒಟ್ಟು 32 ಸಾವಿರ ಎಕರೆಯಲ್ಲಿ ಹಾನಿ ಸಂಭವಿಸಿದೆ ಹಾಗೂ ಭಸ್ಮವಾದ ಕಟ್ಟಡಗಳ ಸಂಖ್ಯೆ 10 ಸಾವಿರಕ್ಕೇರಿದೆ. ಮೃತರ ಸಂಖ್ಯೆ 10ಕ್ಕೆ ಏರಿದೆ. ಅಲ್ಲದೆ, ಹಾನಿ ಪ್ರಮಾಣ 13 ಲಕ್ಷ ಕೋಟಿ ರೂ. ತಲುಪಿದೆ.
ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಸುತ್ತಲಿನ ಹಾಲಿವುಡ್ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ರಕ್ಷಣಾ ಸಿಬ್ಬಂದಿ ಚಾಲನೆ ನೀಡಿದ್ದಾರೆ. ಈ ನಡುವೆ 1.5 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಸುಮಾರು 2,000 ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ವರದಿಗಳು ತಿಳಿಸಿದೆ.
ಲಾಸ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚು ಕ್ಷಣ ಕ್ಷಣಕ್ಕೂ ವ್ಯಾಪಿಸುತ್ತಲೇ ಇದ್ದು, ಹಾಲಿವುಡ್, ಬಾಲಿವುಡ್ ನಟ-ನಟಿಯರಿಗೆ ಶೂಟಿಂಗ್ ಸ್ಥಗಿತಗೊಳಿಸಿ ಸ್ಥಳದಿಂದ ಹೊರಡುವಂತೆ ಸೂಚಿಸಲಾಗಿದೆ.
