

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡು ಅರ್ಧ ಗಂಟೆ ಭಾಷಣ ಮಾಡಿದ್ದ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ 20 ಸುಳ್ಳುಗಳನ್ನು ಹೇಳಿದರು ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಪ್ರಕಟಿಸಿದೆ.
ಆರ್ಥಿಕತೆ, ವಿದೇಶಾಂಗ ನೀತಿ, ವಲಸೆ, 2020ರ ಚುನಾವಣೆ- ಮೊದಲಾದವುಗಳ ಬಗ್ಗೆ ಮಾತನಾಡುವಾಗ ಟ್ರಂಪ್ ಸುಳ್ಳು ಹೇಳಿದರು ಎಂದು ಅದು ಹೇಳಿದೆ.
ಈಮುಂಚೆತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಟ್ರಂಪ್ 30,573 ಸುಳ್ಳುಗಳನ್ನು ಹೇಳಿದ್ದರು. ಸುಳ್ಳಿನ ದಿನದ ಸರಾಸರಿ 21 ಆಗಿತ್ತು ಎಂದು ಈ ಹಿಂದೆ ಮಾಧ್ಯಮ ವರದಿಗಳು ಹೇಳಿದ್ದವು.
ಹಿಟ್ಲರ್ ಶೈಲಿಯಲ್ಲಿ ಕೈಬೀಸಿದ ಮಸ್ಕ್:
ಪರಮಾಪ್ತ ಹಾಗೂ ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್, ಟ್ರಂಪ್ ಅಧಿಕಾರ ಸ್ವೀಕಾರದ ಸಮಾರಂಭದಲ್ಲಿ ಮಾಡಿರುವ ಕೈಸನ್ನೆ ವಿವಾದಕ್ಕೀಡಾಗಿದೆ. ಇದು ಹಿಟ್ಲರ್ ಕೈಬೀಸುವ ಶೈಲಿ ಎಂದು ಅನೇಕರು ಕಿಡಿಕಾರಿದ್ದಾರೆ.
