

ಪುತ್ತೂರು :ಮುಕ್ವೆ ಜಮಾಅತ್ ಅನುಮತಿ ಮೇರೆಗೆ ಅನ್ ನೂರ್ ಹನಫಿ ಕಮಿಟಿ ಹಾಗೂ ಯಂಗ್’ಮೆನ್ ಕಮಿಟಿ ಮುಕ್ವೆ ಆಶ್ರಯದಲ್ಲಿ ನಡೆಯುತ್ತಿರುವ ಮುಕ್ವೆ ಉರೂಸ್ ಹಿನ್ನೆಲೆಯಲ್ಲಿ ಜನವರಿ 25ರಂದು ಅತ್ಯಾಕರ್ಷಕ ಸಂದಲ್ ಮೆರವಣಿಗೆ ಜರುಗಲಿದೆ.
ಬೆದ್ರಾಳದಿಂದ ಸಂಜೆ 7.30ರ ಸುಮಾರಿಗೆ ಹೊರಡುವ ಸಂದಲ್ ಮೆರವಣಿಗೆ ಮುಕ್ವೆ ಮಸೀದಿ ವಠಾರದಲ್ಲಿ ಸಮಾಪನಗೊಳ್ಳಲಿದೆ. ಸಂದಲ್ ಮೆರವಣಿಗೆ ಹಾಗೂ ಬೃಹತ್ ಮೆಹಫಿಲೇ ನಾತ್ ಇದರಲ್ಲಿ ವರ್ಣರಂಜಿತ ತಾಲೀಮ್ ಹಾಗೂ ದಫ್ ಪ್ರದರ್ಶನ ವಿಶೇಷ ಆಕರ್ಷಣೆಯಾಗಿರಲಿದೆ.
ಬೃಹತ್ ಮೆಹಫಿಲೇ ನಾತ್’ನಲ್ಲಿ ಅನಸ್ ಉರುಮನೆ, ಮಶೂಫ್ ಶಿರ್ವಾ, ಮುನೀರ್ ಕೃಷ್ಣಾಪುರ, ಅಸಫ್ ಪಡುಬಿದ್ರೆ ಮೊದಲಾದವರು ಭಾಗವಹಿಸಲಿದ್ದಾರೆ. ಪ್ರತಿವರ್ಷದಂತೆ ನಡೆಯುವ ಸಂದಲ್ ಮೆರವಣಿಗೆ ವೀಕ್ಷಿಸಲು ತಾಲೂಕು ಹಾಗೂ ಹೊರ ತಾಲೂಕಿನ ಅನೇಕ ಮಂದಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
