

ಬೆಂಗಳೂರು : ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾಗಿ ಹಿರಿಯ ಪತ್ರಕರ್ತ ಬದ್ರುದ್ದೀನ್ .ಕೆ ಮಾಣಿ ಸಹಿತ 8 ಮಂದಿ ನೇಮಕ ಮಾಡಿ ರಾಜ್ಯಪಾಲರ ಆದೇಶ ಹೊರಡಿಸಿದೆ.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಶಿತ್ ಮೋಹನ್ ಪ್ರಸಾದ್ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.
ಬದ್ರುದ್ದೀನ್ ಅವರು ಕಳೆದ ೩ ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಜನಮನ್ನಣೆಯನ್ನು ಗಳಿಸಿದ್ದರು. ೨೦೧೪ರಿಂದ ಪಬ್ಲಿಕ್ ಟಿವಿಯಲ್ಲಿ ರಾಜಕೀಯ ವಿಭಾಗದಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಮಾಧ್ಯಮ ಕ್ಷೇತ್ರದ ಗಣನೀಯ ಸಾಧನೆಗೆ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಮಾಣಿ ಸ. ಹಿ. ಪ್ರಾ. ಶಾಲೆ, ಮಾಣಿ ಕರ್ನಾಟಕ ಪ್ರೌಢ ಶಾಲೆ, ಕೊಂಬೆಟ್ಟು ಸ. ಜೂನಿಯರ್ ಕಾಲೇಜು, ಪುತ್ತೂರು ಸೈಂಟ್ ಫಿಲೋಮಿನ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.
ಮಾಣಿಯ ಕೊಡಾಜೆ ನಿವಾಸಿ ದಿ. ಅಬ್ದುಲ್ ಖಾದರ್ ಹಾಗೂ ಮಿತ್ತೂರು ಅಕ್ಕರೆ ನಿವಾಸಿ ದಿ. ಐಸಮ್ಮಾ ದಂಪತಿಗಳ ಪುತ್ರ.
