

ನಾನು ನಿನ್ನನ್ನು ಮದುವೆ ಮಾಡಿಕೊಳ್ಳುವುದಿಲ್ಲ, ನಾನು ಇನ್ನೂ ಓದಬೇಕು ಎಂದು ಯುವಕನ ಪ್ರೇಮ ನಿವೇದನೆ ಹಾಗೂ ಮದುವೆಯ ಪ್ರಪೋಸಲ್ ನಿರಾಕರಿಸಿದ ಪದವಿ ಕಾಲೇಜು ಯುವತಿಯನ್ನು ಹಾಡು ಹಗಲೇ ನಡು ರಸ್ತೆಯಲ್ಲಿ ಯುವಕನೊಬ್ಬ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ
ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಹೊರ ಭಾಗದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ವಿದ್ಯಾರ್ಥಿನಿ ಶಿಫಾ (22) ಎಂದು ಗುರುತಿಸಲಾಗುದೆ. ಮೂಲತಃ ರಾಯಚೂರು ಜಿಲ್ಲೆ ಲಿಂಗಸೂಗೂರಿನ ವಿದ್ಯಾರ್ಥಿನಿ ಶಿಫಾ ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಂಎಸ್‌ಸಿ ಓದುತ್ತಿದ್ದಳು. ಬೆಳಗ್ಗೆ ಲಿಂಗಸುಗೂರಿನಿಂದ ಸಿಂಧನೂರಿಗೆ ಕಾಲೇಜಿಗೆ ಹೋಗಿದ್ದ ಶಿಫಾ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಈಕೆಯ ಪರಿಚಯಸ್ಥರೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿತ್ತು. ಸ್ಥಳಕ್ಕೆ ಸಿಂಧನೂರು ಟೌನ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿತ್ತು.
ಇನ್ನು ಈ ಕೇಸಿನ ಆರೋಪಿಯನ್ನು ಜಾಡು ಹಿಡಿದು ಹೊರಟ ಪೋಲೀಸರಿಗೆ ಹಾಡುಹಗಲೇ ನಡುರಸ್ತೆಯಲ್ಲಿ ವಿದ್ಯಾರ್ಥಿನಿಯನ್ನು ಕೊಲೆ ಮಾಡಿ ಪರಾರಿ ಆಗಿದ್ದ, ಲಿಂಗಸುಗೂರು ಮೂಲದ ಆರೋಪಿ ಮುಬಿನ್ ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ಕೊಲೆಗೆ ಕಾರಣ ತಿಳಿಯದಿದ್ದರೂ, ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ. ಆಗ ಶಿಫಾ ನನ್ನ್ನು ಮದುವೆ ಮಾಡಿಕೊಳ್ಳುವುದಕ್ಕೆ ನಿರಾಕರಿಸಿದ್ದಳು. ಹೀಗಾಗಿ, ನನಗೆ ಸಿಗದ ನೀನು ಇನ್ಯಾರಿಗೂ ಸಿಗಬಾರದು ಎಂದು ಚಾಕುವಿನಿಂದ ಇರುದು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಇದೀಗ ಮುಬಿನ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಕಾನೂನು ಕ್ರಮದ ಅನುಸಾರ ಕೋರ್ಟ್‌ಗೆ ಹಾಜರುಪಡಿಸಿ ನಂತರ ಮತ್ತಷ್ಟು ಮಾಹಿತಿ ಕಲೆಹಾಕಲು ವಿಚಾರಣೆ ನಡೆಸಲಿದ್ದಾರೆ.
