

ರಸ್ತೆಗಳಲ್ಲಿ ಕಿರಿಕ್ ಮಾಡಿ, ಹೊಡೆದಾಡುವ ಘಟನೆಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಸಾಮಾನ್ಯವಾಗಿ ಕಾರು ಮತ್ತು ಬೈಕ್ ಸವಾರರ ನಡುವೆ ಕಿರಿಕ್ ಆಗುತ್ತಿತ್ತು, ಆದರೆ ಇಲ್ಲೊಂದು ಗ್ಯಾಂಗ್ ಮಂಗಳೂರು-ಬೆಂಗಳೂರು ಮಾರ್ಗದ ಖಾಸಗಿ ಬಸ್ ತಡೆದು ನಿಲ್ಲಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಖಾಸಗಿ ಬಸ್ ಬೆಂಗಳೂರಿಂದ ಮಂಗಳೂರಿಗೆ ತೆರಳುತ್ತಿತ್ತು, ಆದರೆ ದಿಢೀರ್ ದೇವರಾಯಪಟ್ಟಣ ಬಳಿ ಕಾರಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್ ಬಸ್ ಅಡ್ಡಗಟ್ಟಿದೆ. ನಂತರ ಕಾರಿನಿಂದ ಇಳಿದು ಬಂದ ಗ್ಯಾಂಗ್ ಖಾಸಗಿ ಬಸ್ ಗಾಜು ಒಡೆದು ಗಲಾಟೆ ಮಾಡಿ ಪುಡಿಪುಡಿ ಮಾಡಿದೆ.
ಮತ್ತೊಬ್ಬ ವ್ಯಕ್ತಿ ಇದೇ ಸಮಯದಲ್ಲಿ ಲಾಂಗ್ ಕೈಯಲ್ಲಿ ಹಿಡಿದು ಬಂದು ಬಸ್ ಗಾಜು ಒಡೆದು ಅಟ್ಟಹಾಸ ಮೆರೆದಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಜನ ಈ ಘಟನೆ ಬಗ್ಗೆ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ.
