ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಿದ್ದು, ಕರ್ನಾಟಕದಿಂದ ಹೋಗುವ ಭಕ್ತರಿಗೆ ಬಂಟ್ವಾಳ ಬಡಗಬೆಳ್ಳೂರು ಮೂಲದ ನಾಗಸಾಧು ತಪೋನಿಧಿ ಬಾಬಾ ವಿಠ್ಠಲ್ ಗಿರಿ ಮಹಾರಾಜ್ ಜೀ ಪ್ರಮುಖ ಆಕರ್ಷಣೆಯಾಗಿದ್ದಾರೆ.
ವಿಶೇಷವಾಗಿ ಕರಾವಳಿಯಿಂದ ತೆರಳಿರುವ ಭಕ್ತರು ವಿಠ್ಠಲ್ ಗಿರಿ ಮಹಾರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಆಶೀರ್ವಾದ ಪಡೆಯುತ್ತಿದ್ದಾರೆ.
ಬಡಗಬೊಳ್ಳೂರಿನ ವಿಠಲ ಪೂಜಾರಿ ಹರಿದ್ವಾರ ಕುಂಭಮೇಳದಲ್ಲಿ ತಪೋನಿಧಿ ಪಂಚಾಯತ್ ಆನಂದ್ ಅಖಾಡದ ಪರಮಹಂಸ ಬಾಬಾ ಶ್ರೀ ಮಹಾರಾಜ್ ಜೀ ಅವರ ಶಿಷ್ಯನಾಗಿ ದೀಕ್ಷೆ ಪಡೆದಿದ್ದು, ಬಳಿಕ ತಪೋನಿಧಿ ಬಾಬಾ ವಿಠ್ಠಲ್ ಗಿರಿ ಮಹಾರಾಜ್ ಜೀ ಎಂದು ಆಧ್ಯಾತ್ಮದ ಹೆಸರಿನ ಮೂಲಕ ಖ್ಯಾತಿ ಗಳಿಸಿದ್ದಾರೆ.
ಈ ಹಿಂದೆ ಆರೆಸ್ಸೆಸ್ ಸ್ವಯಂಸೇವಕನಾಗಿದ್ದು, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಮೈಸೂರಿನಲ್ಲಿ ಧರ್ಮ ಜಾಗರಣದ ಪ್ರಚಾರಕನಾಗಿಯೂ ಕೆಲಸ ಮಾಡಿದ್ದರು. ಪ್ರಸ್ತುತ ಉತ್ತರಭಾರತದಲ್ಲಿ ನೆಲೆಸಿ ಆಧ್ಯಾತ್ಮದ ಧ್ಯಾನದಲ್ಲಿ ತೊಡಗಿದ್ದಾರೆ.