ಪ್ರೇಮಿಗಳ ದಿನಕ್ಕೆ ಇನ್ನೇನು ಒಂದು ದಿನ ಬಾಕಿ ಇತ್ತು. ಆದರೆ ಅದರ ಹಿಂದಿನ ದಿನವೇ ಶಾಕಿಂಗ್ ಸುದ್ದಿಯೊಂದು ಹುಬ್ಬಳ್ಳಿಯ ಜನರನ್ನ ನಿದ್ದೆ ಕೆಡಿಸಿತ್ತು. ಅದೇ ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆ 50 ವರ್ಷದ ಅಂಕಲ್‌ನ ಶುರು ಮಾಡಿರೋ ಲವ್ವಿ ಡವ್ವಿ ಕಥೆ.

ಅಷ್ಟೇ ಅಲ್ಲ ಹುಡುಗಿಯ ತಲೆ ಕೆಡಿಸಿ ಊರೂ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿತ್ತು. ಆದ್ರೆ ನಿನ್ನೆ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಂಕಲ್‌ ಜೊತೆ ಹೋಗಿದ್ದ ಹುಡುಗಿ ಮರಳಿ ಮನೆಗೆ ಬಂದಿದ್ದಾಳೆ. ಇಂದು ಆ ಕಿಲಾಡಿ ಅಂಕಲ್ ಅರೆಸ್ಟ್ ಆಗಿದ್ದಾನೆ.

50 ವರ್ಷದ ವ್ಯಕ್ತಿಯೊಬ್ಬ 18 ವರ್ಷದ ಯುವತಿಯನ್ನು ಮದುವೆಯಾದ ಘಟನೆ ಬೆಳಕಿಗೆ ಬಂದಿತ್ತು. ಈ ಯುವತಿಯ ತಲೆಕೆಡೆಸಿ ಆರೋಪಿ ಪ್ರಕಾಶ್ ಎಂಬಾತ ಮದುವೆಯಾಗಿದ್ದಾನೆ. ಯುವತಿಯನ್ನು ಕೊಲ್ಹಾಪುರಕ್ಕೆ ಕಳುಹಿಸಿದರೂ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದನು.

ಆರೋಪಿ ಪ್ರಕಾಶ್‌ನ ಕಿರುಕುಳ ತಾಳಲಾರದೆ ಯುವತಿ ಮನೆಗೆ ಮರಳಿ ಬಂದಿದ್ದಾಳೆ. ಯುವತಿ ನೀಡಿದ ದೂರಿನ ಮೇರೆಗೆ ಕೇಶ್ವಾಪುರ ಪೊಲೀಸರು ಪ್ರಕಾಶ್‌ನನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಫೆಬ್ರವರಿ 18 ರಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿ ಅಪ್ರಾಪ್ತೆಯಾಗಿದ್ದಾಗ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿ ಬಾಲ್ಯದಿಂದಲೂ ಪರಿಚಿತನಾಗಿದ್ದ ಆರೋಪಿ, ಆಕೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!