
ಮಗುವಿನ ಚಿಕಿತ್ಸೆ ಗಾಗಿ ಬುರ್ಕಾ ಧರಿಸಿ ತಾಯಿ ಭಿಕ್ಷೆ ಬೇಡಿದ ಮನಕಲುವ ಘಟನೆ ಬೆಂಗಳೂರಿನ ಚಂದ್ರ ಲೇಔಟ್ ನಲ್ಲಿ ನಡೆದಿದೆ
ಮಂಡ್ಯ ಮೂಲದ ಶೋಭಾ ಬುರ್ಕಾ ಧರಿಸಿ ಭಿಕ್ಷೆ ಬೇಡಿದ ತಾಯಿ..ಶೋಭಾಗೆ ಆರು ಮತ್ತು ನಾಲ್ಕು ವರ್ಷದ ಎರಡು ಹೆಣ್ಣು ಮಕ್ಕಳಿದ್ದಾವೆ.
ಅದರಲ್ಲಿ ಎರಡನೇ ಮಗು ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿತ್ತು.ಮಗುವಿನ ಮೆಡಿಸನ್ ಮತ್ತು ಊಟಕ್ಕೆ ಹಣ ಇಲ್ಲದೆ ಪರದಾಡ್ತಿದ್ದ ಶೋಭಾಗೆ ಬುರ್ಕಾ ಹಾಕೊಂಡು ಭಿಕ್ಷೆ ಬೇಡಿದ್ರೆ ಹಣ ಸಿಗುತ್ತೆ ಅಂತ ಬುರ್ಕಾ ಹಾಕೊಂಡು ಭಿಕ್ಷೆ ಬೇಡ್ತಿದ್ದರು
ಶೋಭಾಳನ್ನು ಕಂಡ ಸ್ಥಳೀಯರು ಮಕ್ಕಳ ಕಳ್ಳಿ ಅಂತಾ ಅನುಮಾನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ರು.ಸ್ಥಳಕ್ಕೆ ಬಂದ ಚಂದ್ರಾಲೇಔಟ್ ಪೊಲೀಸರು, ಶೋಭಾಳನ್ನು ವಶಕ್ಕೆ ಪಡೆದು ವಿಚಾರಣೆ ವೇಳೆ ವಿಚಾರ ಬೆಳಕಿಗೆ ಬಂದಿದೆ.
