ಪ್ರೀತಿಸಿ ಮದುವೆಯಾದ ಜೋಡಿಗೆ ಮನೆಯಿಂದ ಬಹಿಷ್ಕಾರ ಹಾಕಿದ ಹಿನ್ನೆಲೆಯಲ್ಲಿ ಯುವತಿ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಮಂಡ್ಯದ ಪಾಂಡವಪುರ ತಾಲ್ಲೂಕಿನ ಶಿಂಡಬೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಾಧಿಕಾ (23) ಮೃತ ದುರ್ದೈವಿ.

ಗ್ರಾಮದ ಅಜಯ್ ಗೌಡ ಎಂಬ ಯುವಕ ದಾವಣಗೆರೆ ಮೂಲದ ಯುವತಿಯನ್ನು ಕಳೆದ ಮೂರು ತಿಂಗಳ ಹಿಂದೆ ಪ್ರೀತಿಸಿ‌ ಮದುವೆಯಾಗಿದ್ದ.ಶನಿವಾರ ಗ್ರಾಮದಲ್ಲಿ ಹಬ್ಬ ಇದ್ದ ಕಾರಣಕ್ಕೆ ಪತ್ನಿಯನ್ನು ಮನೆಗೆ ಕರೆ ತಂದಿದ್ದ‌.

ಆದರೆ ಜೋಡಿಯನ್ನು ಮನೆಗೆ ಸೇರಿಸಿಕೊಳ್ಳಲು ಅಜಯ್‌ ಮನೆಯವರು ನಿರಾಕರಿಸಿದ್ದರು. ಹೀಗಾಗಿ ಅಜಯ್‌ ತನ್ನ ಪತ್ನಿಯನ್ನು ಚಿಕ್ಕಪ್ಪನ ಮನೆಗೆ ಕರೆದೊಯ್ದಿದ್ದ. ಆದರೆ ಈ ಘಟನೆಯಿಂದ ಮನನೊಂದ ರಾಧಿಕಾ ಚಿಕ್ಕಪ್ಪನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌

Leave a Reply

Your email address will not be published. Required fields are marked *

Join WhatsApp Group
error: Content is protected !!