ದೆ ಹಲಿಯಲ್ಲಿ ಅಧಿಕಾರಕ್ಕೇರಿದ 10 ದಿನಗಳ ಅವಧಿಯಲ್ಲೇ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾಗುಪ್ತಾ ಅವರು ಫೂಲ್ ಟ್ರೋಲ್ ಆಗುತ್ತಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಅವರು ಪ್ರಮುಖ ಚರ್ಚೆ ನಡೆಯುವಾಗ ಅವರ ಮಾಡಿರುವ ಕೆಲಸ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹೌದು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಬಿಜೆಪಿಯು ಚುನಾವಣೆ ಸಮಯದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ಸವಾಲಿನಲ್ಲಿ ಇದೆ.
ರೇಖಾಗುಪ್ತಾ ಅವರು ಇದೇ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಅವರಿಗೆ ಸಚಿವರಾಗಿ ಇಲ್ಲವೇ ಶಾಸಕಿಯಾಗಿಯೂ ಅಧಿಕಾರ ನಿರ್ವಹಿಸಿರುವ ಜವಾಬ್ದಾರಿ ಇಲ್ಲ. ಹೀಗಾಗಿ ಎಲ್ಲರ ಕಣ್ಣು ಅವರ ಮೇಲೆಯೇ ಇದೆ. ಅವರು ಮೊದಲ ಅವಧಿಯಲ್ಲಿ ಯಾವ ರೀತಿ ಆಡಳಿತ ನಡೆಸಲಿದ್ದಾರೆ ಎನ್ನುವ ಬಗ್ಗೆ ಸಣ್ಣ ಆತಂಕ ಬಿಜೆಪಿ ಹೈಕಮಾಂಡ್‌ನಲ್ಲಿಯೂ ಇದೆ. ಈ ರೀತಿ ಇರುವಾಗಲೇ ದೆಹಲಿ ವಿಧಾನಸಭೆಯ ಮೊದಲ ಅಧಿವೇಶನ ನಡೆಯುತ್ತಿದೆ.
ದೆಹಲಿಯ ಮೊದಲ ಅಧಿವೇಶದಲ್ಲಿ ಎಲ್ಲಾ ಪಕ್ಷಗಳ ಶಾಸಕರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಅಲ್ಲದೆ ದೆಹಲಿಯ ಆರ್ಥಿಕ ವಿಷಯ ಹಾಗೂ ವಿವಿಧ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ರೀತಿ ಇರುವಾಗಲೇ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾಗುಪ್ತಾ ಅವರು ನಿದ್ರೆಗೆ ಜಾರಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ವಿಡಿಯೋವನ್ನು ಆಮ್ ಆದ್ಮಿ ಪಾರ್ಟಿಯು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ವ್ಯಂಗ್ಯವಾಡಿದೆ.
ಇವರೇ ನೋಡಿ ದೆಹಲಿ ಮುಖ್ಯಮಂತ್ರಿ ಎಂದ ಎಎಪಿ: ಇನ್ನು ದೆಹಲಿಯ ನೂತನ ಮುಖ್ಯಮಂತ್ರಿ ರೇಖಾಗುಪ್ತಾ ಅವರು ಮೊದಲ ಅಧಿವೇಶನದಲ್ಲೇ ನಿದ್ದೆ ಮಾಡಿರುವುದಕ್ಕೆ ದೆಹಲಿಯ ವಿರೋಧ ಪಕ್ಷ ಆಮ್ ಆದ್ಮಿ ಪಾರ್ಟಿಯು ವ್ಯಂಗ್ಯವಾಡಿದೆ. ಇವರೇ ನೋಡಿ ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಜಿ. ದೆಹಲಿಯ ಜನರು ಇವರನ್ನು ದೆಹಲಿಯ ಕೆಲಸ ಮಾಡುವುದಕ್ಕೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ, ಸಿಎಂ ಮೇಡಂ ಅವರು ಸದನದಲ್ಲಿ ಚರ್ಚೆಯುವ ಸಮಯದಲ್ಲೇ ನಿದ್ರಿಗೆ ಜಾರಿದ್ದಾರೆ.
ರೇಖಾ ಗುಪ್ತಾ ಅವರೇ, ಡಾ.ಬಿ ಆರ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರನ್ನು ಅವಮಾನಿಸಿದ್ದೀರಿ. ನಿಮಗೆ ಸ್ವಲ್ಪ ಬಿಡುವು ಸಿಕ್ಕರೆ, ದಯವಿಟ್ಟು ಸದನದಲ್ಲಿ ನಡೆಯುವ ಚರ್ಚೆಯತ್ತ ಗಮನ ಕೊಡಿ ಎಂದು ರೇಖಾ ಗುಪ್ತಾ ಅವರ ಬಗ್ಗೆ ಎಎಪಿ ವ್ಯಂಗ್ಯವಾಡಿದೆ.














