
ಪುತ್ತೂರು: ಸಂತ ಫಿಲೋಮಿನಾ ಕಾಲೇಜ್ (ಸ್ವಾಯತ್ತ) ವಿಜ್ಞಾನ ವೇದಿಕೆ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು. ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ.ರಾಮನ್ ಅವರ ಪರಿಣಾಮದ ಆವಿಷ್ಕಾರವನ್ನು ಸ್ಮರಿಸಲು ಕಾರ್ಯಕ್ರಮವನ್ನು ಆಯೋಜಿಸಿತು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಂಧರ್ಭದಲ್ಲಿ ಸರ್ಕಾರದ ಆದೇಶದಂತೆ ಪೂರ್ವಾಹ್ನ 10:30ಕ್ಕೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಪ್ರತಿಜ್ಞಾವಿಧಿ ನೆರವೇರಿಸಿದರು. ಬಳಿಕ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕೌತುಕ ಪ್ರವೃತ್ತಿಯ ಅಧ್ಯಯನ ಕ್ರಮವನ್ನು ಅನುಸರಿಸಿ, ಸೃಜನಶೀಲತೆಯೊಂದಿಗೆ ಆಲೋಚಿಸಬೇಕು ಎಂದು ಪ್ರೇರೇಪಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರು ಅವೆಂಚುರಾ ಆಗೋ ಪ್ರಾಡಕ್‌ಟ್‌ಸ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಕೆ. ವಿಷು ಕುಮಾರ್, ವಿಜ್ಞಾನವು ಕೇವಲ ವಿಷಯವಲ್ಲ. ಬದಲಾಗಿ ಜಗತ್ತನ್ನು ಅನ್ವೇಷಿಸಲು ಮತ್ತು ಅದನ್ನು ಅರ್ಥೈಸಲು ಒಂದು ಮಾರ್ಗವಾಗಿದೆ. ವಿದ್ಯಾರ್ಥಿಗಳಿಗೆ ಸಂತೋಷದೊಂದಿಗೆ ಕಲಿಯಲು, ಸದಾ ನವೀನತೆಯನ್ನು ಅನ್ವೇಷಿಸಲು, ಮತ್ತು ವೈಜ್ಞಾನಿಕ ಸಮುದಾಯಕ್ಕೆ ತಮ್ಮ ಕೊಡುಗೆಯನ್ನು ನೀಡಲು ಪ್ರೇರೇಪಿಸಿದರು.
ಪರಿಸರ ಅಧ್ಯಯನದ ಮೇಲೆ ಪ್ರಾಧ್ಯಾಪಕಿಯರಾದ ಸ್ಮಿತಾ ವಿವೇಕ್, ಶಿವಾನಿ ಮಲ್ಯ ಬರೆದ ಪುಸ್ತಕವನ್ನು ಕಾಲೇಜಿನ ಕುಲಸಚಿವ (ಪರೀಕ್ಷಾಂಗ) ಡಾ.ವಿನಯಚಂದ್ರ ಅನಾವರಣಗೊಳಿಸಿದರು.
“ಸೈಪ್ಯೂಷನ್” ಎಂಬ ಶೀರ್ಷಿಕೆಯಲ್ಲಿ ವಿಭಿನ್ನ ವೈಜ್ಞಾನಿಕ ಸ್ಪರ್ಧೆಗಳನ್ನು ವಿಜ್ಞಾನ ವಿಭಾಗದ ಮುಖ್ಯಸ್ಥೆಡಾ. ಮಾಲಿನಿ ಕೆ, ವಿಜ್ಞಾನ ವೇದಿಕೆಯ ಸಂಚಾಲಕ ಡಾ. ಎಲ್ವಿನ್ ಎಸ್. ಡಿಸೋಜಾ, ಶ್ರಿರಕ್ಷಾ ಬಿ.ವಿ. ಅವರೊಂದಿಗೆ ಸಂಯೋಜಿಸಿದರು. ಸುಮಾರು 140 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿನಿರಿಯಾ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು, ಮಾನಸಾ ಮತ್ತು ತಂಡ ಪ್ರಾರ್ಥನೆ ಹಾಡಿದರು. ವಿಜ್ಞಾನ ವೇದಿಕೆಯ ಅಧ್ಯಕ್ಷೆ ಶ್ರೀದೇವಿ ಸ್ವಾಗತಿಸಿದರು. ವಿಜ್ಞಾನ ವೇದಿಕೆಯ ಕಾರ್ಯದರ್ಶಿ ಅಶ್ಲೇಶ್ ವಂದಿಸಿದರು.
