
ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ಬೆಳ್ಳಿಹಬ್ಬ ಸಿಲ್ವರಿಯಂ ಪ್ರಯುಕ್ತ ‘ಇಂಕ್ ಲಿಂಕ್’ ಬರಹಗಾರರ ಸಮಾವೇಶ ಫೆ.೨೭ರಂದು ಕುಂಬ್ರ ಮರ್ಕಝ್ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಪತ್ರಕರ್ತ, ಕವಿ ಶಂಶೀರ್ ಬುಡೋಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತ, ಸಾಹಿತಿ ಹಂಝ ಮಲಾರ್ ಅವರು ‘ಮಹಿಳಾ ವಿದ್ಯಾಭ್ಯಾಸ ಬದಲಾಗಬೇಕಾದ ವ್ಯವಸ್ಥೆಗಳು’ ಎನ್ನುವ ವಿಚಾರ ಮಂಡಿಸಿ ಮಹಿಳಾ ಶಿಕ್ಷಣ ಅಗತ್ಯತೆ, ಸವಾಲುಗಳ ಬಗ್ಗೆ ವಿವರಿಸಿದರು.
ಚರ್ಚೆ ನಿರ್ವಹಣೆ ಮಾಡಿದ ಪತ್ರಕರ್ತ, ಚಿಂತಕ ಇಸ್ಮತ್ ಫಜೀರ್ ಅವರು ಮಹಿಳಾ ಶಿಕ್ಷಣದ ಅನಿವಾರ್ಯತೆ, ದೂರದೃಷ್ಟಿ ಚಿಂತನೆ, ತಾರತಮ್ಯ ನೀತಿ ಮತ್ತು ಪತ್ರಕರ್ತರ ಹೊಣೆಗಾರಿಕೆ ಕುರಿತು ವಿವರಿಸಿದರು.
ಕುಂಬ್ರ ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಡಾ.ಅಬ್ದುರ್ರಶೀದ್ ಝೈನಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಮರ್ಕಝುಲ್ ಹುದಾ ಕಾಲೇಜು ನಡೆದು ಬಂದ ಹಾದಿಯ ಬಗ್ಗೆ ಮೆಲುಕು ಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಕುಂಬ್ರ ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಂ ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ಮಾತನಾಡಿ ಕಳೆದ ೨೫ ವರ್ಷಗಳಿಂದ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕಾರ್ಯಾಚರಿಸುತ್ತಿದ್ದು ಸಾವಿರಾರು ವಿದ್ಯಾರ್ಥಿನಿಯರ ಬದುಕನ್ನು ಬೆಳಗಿಸಿದೆ ಎಂದರು.
ಪತ್ರಕರ್ತರಾದ ಹಮೀದ್ ಕೂರ್ನಡ್ಕ, ಯೂಸುಫ್ ರೆಂಜಲಾಡಿ, ಲತೀಫ್ ನೇರಳಕಟ್ಟೆ, ಫಾರೂಕ್ ಶೇಕ್ ಮುಕ್ವೆ, ಎ.ಕೆ ನಂದಾವರ, ಬರಹಗಾರರಾದ ಹೈದರಾಲಿ ಐವತ್ತೊಕ್ಲು, ಅಬೂಬಕ್ಕರ್ ಅನಿಲಕಟ್ಟೆ, ಸಲೀಂ ಮಾಣಿ, ಸಲಾಹ್ ಕುತ್ತಾರ್, ಯೂಸುಫ್ ನಬ್‌ಹಾನಿ, ಅಝೀಝ್ ಝುಹ್ರಿ ಪುಣಚ, ಹುಸೈನ್ ಸಅದಿ ಹೊಸ್ಮಾರ್, ರಂಶೀದ್ ಸಖಾಫಿ, ಸ್ವಾದಿಕ್ ಅಲಿ ಸಂಪ್ಯ ಮೊದಲಾದವರು ತಮ್ಮ ಅಭಿಪ್ರಾಯ ಮಂಡಿಸಿದರು. ಕುಂಬ್ರ ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಸದಸ್ಯರಾದ ಅನ್ವರ್ ಹುಸೇನ್ ಗೂಡಿನಬಳಿ, ಆಶಿಕುದ್ದೀನ್ ಅಖ್ತರ್ ಕುಂಬ್ರ ಉಪಸ್ಥಿತರಿದ್ದರು. ಕುಂಬ್ರ ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸ್ವಾಗತಿಸಿದರು. ರಶೀದ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.
