
ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಸಹೋದರ ವಿನೋದ್ ಸೆಹ್ವಾಗ್ ಅರೆಸ್ಟ್ ಆಗಿದ್ದಾರೆ
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಹ್ವಾಗ್ ಸಹೋದರನನ್ನು ಬಂಧಿಸಲಾಗಿದೆ. ವಿನೋದ್ ಸೆಹ್ವಾಗ್ ವಿರುದ್ಧ 7 ಕೋಟಿ ಚೆಕ್ ಬೌನ್ಸ್ ಪ್ರಕರಣವಿದ್ದು, ವಿಚಾರಣೆಗೆ ವಿನೋದ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರನ್ನು ತಲೆಮರೆಸಿಕೊಂಡ ಆರೋಪಿ ಎಂದು ಈ ಹಿಂದೆ ಕೋರ್ಟ್ ಘೋಷಿಸಿತ್ತು.
ವಿನೋದ್‌ಗಾಗಿ ಬಲೆ ಬೀಸಿದ್ದ ಹರಿಯಾಣ ಪೊಲೀಸರು ಇಂದು ಮಣಿಮಾಜ್ರಾ ಠಾಣಾ ವ್ಯಾಪ್ತಿಯಲ್ಲಿ ಆತನನ್ನು ಬಂಧಿಸಿದ್ದಾರೆ.
ವಿನೋದ್ ಹರಿಯಾಣದ ಚಂಡೀಗಢ ಬಳಿ ಕೂಲ್ ಡ್ರಿಂಕ್ಸ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ವಿನೋದ್ ಮತ್ತು ಆತನ ಪಾಲುದಾರರು ಹಿಮಾಚಲ ಪ್ರದೇಶದಲ್ಲಿರುವ ನೈನಾ ಪ್ಲಾಸ್ಟಿಕ್ ಕಾರ್ಖಾನೆಯಿಂದ ತಂಪು ಪಾನೀಯ ತುಂಬುವ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸಿ 7 ಕೋಟಿ ರೂ ಮೊತ್ತದ ಚೆಕ್‌ಗಳನ್ನು ನೀಡಿದ್ದರು. ಆದರೆ ಚೆಕ್ ಕ್ಯಾಷ್ ಆಗದೆ ಬೌನ್ಸ್ ಆಗಿದ್ದವು.
ನಂತರ ನೈನಾ ಕಂಪನಿ ವಿನೋದ್ ಮತ್ತು ಪಾರ್ಟ್ನರ್‌ಗಳ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿತ್ತು. ಈ ಕೇಸ್‌ನ ವಿಚಾರಣೆಗೆ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ವಿನೋದ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿತ್ತು.
ಅದರನ್ವಯ ಇದೀಗ ವಿನೋದ್ ಸೆಹ್ವಾಗ್ ಅರೆಸ್ಟ್ ಆಗಿದ್ದಾರೆ
