
ಪತ್ನಿ ಹಾಗೂ ಮಗ ನಾಪತ್ತೆಯಾದ (Missing)ಬಗ್ಗೆ ದೂರು ಸ್ವೀಕರಿಸದ ಹಿನ್ನೆಲೆ ಪೊಲೀಸರ ನಡೆ ಖಂಡಿಸಿ ಪತಿ ಸೇರಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ (protest) ಮಾಡಿರುವಂತಹ ಘಟನೆ ನಡೆದಿದೆ.
ಮದ್ದೂರಿನ ಸಿದ್ದಾರ್ಥನಗರದ ವೆಂಕಟೇಶ್‌ನಿಂದ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
9 ವರ್ಷಗಳ ಹಿಂದೆ ವೆಂಕಟೇಶ್ ಮುಸ್ಲಿಂ ಯುವತಿಯನ್ನ ಪ್ರೀತಿಸಿ ಮದುವೆ ಆಗಿದ್ದರು. ಆನಂತರ ಹಿಂದೂ ಧರ್ಮಕ್ಕೆ ವೆಂಕಟೇಶ್ ಪತ್ನಿ ಮತಾಂತರವಾಗಿದ್ದರು. ಜ.23ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆಯ ತವರು ಮನೆಗೆ ಹೋಗಿದ್ದರು. ಆನಂತರ ಪತ್ನಿ ಹಾಗೂ ಮಗ ಮನೆಗೆ ವಾಪಸ್ ಆಗಿಲ್ಲ ಎಂದು ವೆಂಕಟೇಶ್ ಆರೋಪಿಸಿದ್ದಾರೆ. ಸದ್ಯ ಪತ್ನಿ ಖುಷಿ ತಾಯಿಯ ವಿರುದ್ಧ ದೂರು ನೀಡಲು ವೆಂಕಟೇಶ್ ಮುಂದಾಗಿದ್ದು, ಆದರೆ ದೂರು ಸ್ವೀಕರಿಸದ ಹಿನ್ನೆಲೆ ಪ್ರತಿಭಟನೆ ಮಾಡಲಾಗಿದೆ.
