ಎಂ ಪಿ ಟಿಕೆಟ್ ಕಳೆದುಕೊಂಡು ಇವತ್ತಿಗೆ ಒಂದು ವರ್ಷವಾಯಿತು. ಆದರೆ ಕಾರ್ಯಕರ್ತರ ಪ್ರೀತಿ, ಜನರ ಆಶೀರ್ವಾದ ಇವತ್ತಿಗೂ ಹಾಗೇ ಇದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

MP ಟಿಕೆಟ್ ಕಳೆದುಕೊಂಡು ಇವತ್ತಿಗೆ ಒಂದು ವರ್ಷವಾಯಿತು.ಆದರೆ ಕಾರ್ಯಕರ್ತರ ಪ್ರೀತಿ, ಜನರ ಆಶೀರ್ವಾದ ಇವತ್ತಿಗೂ ಹಾಗೇ ಇದೆ ಮತ್ತು ನೀವು ಕೊಟ್ಟಿರುವ ಈ ಶಕ್ತಿಯಿಂದಲೇ ಇವತ್ತಿಗೂ ಸೈದ್ಧಾಂತಿಕ ಕೆಲಸ ಮತ್ತು ಹೋರಾಟವನ್ನು 8 FIR ಹಾಕಿಸಿಕೊಂಡರೂ ಮುಂದುವರಿಸುತ್ತಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದ ಹೀಗೇ ನಿರಂತರವಾಗಿರಲಿ’ ಎಂದು ತಿಳಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈಸೂರು -ಕೊಡಗು ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಖಚಿತವೆಂದು ಹೇಳಲಾಗಿತ್ತು. ಅದರ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಯದುವೀರ್ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಇದರಿಂದಾಗಿ ಸತತ ಮೂರನೇ ಬಾರಿಗೆ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದ ಪ್ರತಾಪ್ ಸಿಂಹ ಅವರಿಗೆ ನಿರಾಸೆಯಾಗಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!