ಪುತ್ತೂರು: ಸಮಾಜ ಸೇವೆಯ ಉದ್ದೇಶದೊಂದಿಗೆ ಮಕ್ವೆ ಹಾಗೂ ಪುರುಷರಕಟ್ಟೆಯ ಸಮಾನ ಮನಸ್ಕಸ್ನೇಹಿತರು ಸೇರಿ ಗರೀಬ್ ನವಾಜ್ ಚಾರಿಟೇಬಲ್‌ ಟ್ರಸ್ಟ್ ಎನ್ನುವ ಸಮಿತಿಯೊಂದನ್ನು ರಚಿಸಿದ್ದಾರೆ.

ಪುರುಷರಕಟ್ಟೆ ಬಾಲಾಯ ಕಾಂಪ್ಲೆಕ್ ನಲ್ಲಿ ನಡೆದ ಕಾರ್ಯಕ್ರಮವನ್ನು ಅಬ್ದುಲ್ ಹಮೀದ್ ಹನೀಫಿ ದುವಾ ನೆರವೇರಿಸಿ ಉದ್ಘಾಟಿಸಿದರು. ಪುತ್ತೂರು ರೋಟರಿ ಅಧ್ಯಕ್ಷ ಅಶ್ರಫ್ ಮುಕ್ವೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಉಸ್ಮಾನ್ ಪಿ.ಎಸ್ ಮತ್ತು ಹಾಜಿ ಅಬ್ದುಲ್ ರಹ್ಮಾನ್ ಬಾಲಾಯ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಲಹೆಗಾರರ ಪರವಾಗಿ ಅಬ್ದುಲ್ ಕುಂಞ ಪಟ್ಟೆ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿ ಶುಭ ಹಾರೈಸಿದರು.

ಸಲಹಾ ಸಮಿತಿ ಸದಸ್ಯರಾಗಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಹಾಜಿ ಅಬ್ದುಲ್ ರಹ್ಮಾನ್ ಬಾಲಾಯ, ಜಮಾಲುದ್ದೀನ್ ಹಾಜಿ, ಉಮ್ಮರ್ ಹಾಜಿ ರೋಯಲ್, ಅಬ್ದುಲ್ ಕುಂಞ ಪಟ್ಟೆ, ಅಶ್ರಫ್ ಚಿಕ್ಕಳ, ಮೊಯಿದ್ದಿನ್ ಸಾಹೇಬ್ ಮುಕ್ವೆ ಹಾಗೂ ಝನುದ್ದೀನ್ ಹಾಜಿ ಮುಕ್ವೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

ನಂತರ ಗರೀಬ್ ನವಾಝ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಕಾರಿಣಿ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಉಸ್ಮಾನ್ ಪಿ.ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಉಮ್ಮರ್ ಹಾಜಿ ಕುದ್ಕೊಳಿ  ಹಾಗೂ ಕೋಶಾಧಿಕಾರಿಯಾಗಿ ರಫೀಕ್ ಮೈಸೂರು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಪಿ.ಎಂ ಅಶ್ರಫ್ ಮುಕ್ವೆ ಹಾಗೂ ಸಲೀಂ ಮಾಯಂಗಳ, ಜೊತೆ ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಸಿದ್ದೀಕ್ ಚಿಕ್ಕಳ ಹಾಗೂ ಇಸ್ಮಾಯಿಲ್ ಪುರುಷರಕಟ್ಟೆ, ಸಂಘಟನಾ ಕಾರ್ಯದರ್ಶಿಯಾಗಿ ಸಿಯಾಬ್ ಪುರುಷರಕಟ್ಟೆ, ಮಾಧ್ಯಮ ಉಸ್ತುವಾರಿಯಾಗಿ ರಿಯಾಝ್ ಶಾಂತಿಗೋಡು ಹಾಗೂ 16 ಕಾರ್ಯಕಾರಿಣಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಆಬಿದ್ ಮುಕ್ಷೆ ಸ್ವಾಗತಿಸಿದರು. ಅಬೂಬಕ್ಕರ್ ಸಿದ್ದೀಕ್ ಚಿಕ್ಕಳ ವಂದಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!