ವಕ್ಫ್ ಬೋರ್ಡ್ ಗೆ ನಿಯಂತರ ಹೇರುವ ನಿಟ್ಟಿನಲ್ಲಿ ವಕ್ಫ್ ವಿಧೇಯಕಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು ಇದಕ್ಕೆ ವಿರುದ್ಧವಾಗಿ ರಾಜ್ಯದಲ್ಲಿ ಈ ವಿಧೇಯಕವನ್ನು ವಿರೋಧಿಸಿ ಅಧಿವೇಶನದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.

ವಕ್ಫ್ ಮಸೂದೆಯ ತಿದ್ದುಪಡಿಯು ರಾಜ್ಯದ ಜನರ ಆಶಯಗಳಿಗೆ ವಿರುದ್ಧವಾಗಿದೆ. ಹೀಗಾಗಿ ಸದನ ಸರ್ವಾನುಮತದಿಂದ ಈ ತಿದ್ದುಪಡಿಯನ್ನು ತಿರಸ್ಕರಿಸಿದ್ದು ಈ ಶಾಸನವನ್ನು ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಕಾನೂನು ಸಚಿಕ ಹೆಚ್.ಕೆ ಪಾಟೀಲ್, ಈ ಶಾಸನ ರಾಜ್ಯದ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿರುವ ಕಾರಣ ನಾವು ಈ ನಿರ್ಣಯ ಕೈಗೊಂಡಿದ್ದು ಕೂಡಲೇ ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.





Leave a Reply

Your email address will not be published. Required fields are marked *

Join WhatsApp Group
error: Content is protected !!