



ವಿಧಾನಸಭೆ ಅಧಿವೇಶನದ ಅಂತಿಮ ದಿನವಾದ ಇಂದು ಸದನದಲ್ಲಿ ಬಿಜೆಪಿ ಸದಸ್ಯರು (BJP) ಭಾರೀ ಹೈಡ್ರಾಮಾ ಸೃಷ್ಟಿಸಿದ್ದಾರೆ. ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ ಶೇಕಡಾ 4 ಮೀಸಲಾತಿ ನೀಡುವ ವಿಧೇಯಕ ಮಂಡನೆ ಸಂದರ್ಭದಲ್ಲಿ ಭಾರೀ ಅಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಸ್ಪೀಕರ್ ಯುಟಿ ಖಾದರ್ (U T Khadar) ಅವರಿದ್ದ ಪೀಠವನ್ನೇರಿ ಅವರ ಮೇಲೆ ಬಜೆಟ್ ಪ್ರತಿ ಹರಿದು ಕಾಗದ ತೂರಿ ಪ್ರತಿಭಟನೆ (Protest) ಮಾಡಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಸ್ಪೀಕರ್ ಪೀಠಕ್ಕೆ ಅಗೌರವ ಆರೋಪದಡಿ ಬಿಜೆಪಿಯ 18 ಶಾಸಕರನ್ನು ಅಧಿವೇಶನದಿಂದ ಅಮಾನತು ಮಾಡಿ ಸ್ಪೀಕರ್ ಖಾದರ್ ಆದೇಶ ಹೊರಡಿಸಿದ್ದಾರೆ.
ಅಮಾತ್ತುಗೊಂಡ ಶಾಸಕರು!
ಈ ಕ್ಷಣದಿಂದ ಜಾರಿಯಾಗುವಂತೆ, ಬರೋಬ್ಬರಿ 6 ತಿಂಗಳುಗಳ ಕಾಲ ಬಿಜೆಪಿಯ 18 ಮಂದಿ ಶಾಸಕರು ಅಮಾನತ್ತು ಮಾಡಲಾಗಿದೆ. 1- ದೊಡ್ಡಣ್ಣ ಗೌಡ ಪಾಟೀಲ್, 2- ಸಿ ಕೆ ರಾಮಮೂರ್ತಿ, 3- ಅಶ್ವತ್ಥ ನಾರಾಯಣ, 4- ಎಸ್ ಆರ್ ವಿಶ್ವನಾಥ್, 5 – ಬೈರತಿ ಬಸವರಾಜ, 6- ಎಂ ಆರ್ ಪಾಟೀಲ್, 7- ಚನ್ನಬಸಪ್ಪ, 8- ಬಿ ಸುರೇಶ್ ಗೌಡ, 9- ಉಮನಾಥ್ ಕೋಟ್ಯಾನ್.ಹಾಗೂ 10- ಶರಣು ಸಲಗಾರ್, 11- ಶೈಲೇಂದ್ರ ಬೆಲ್ದಾಳೆ, 12- ಯಶಪಾಲ್ ಸುವರ್ಣ, 13- ಹರೀಶ್ ಬಿಪಿ, 14- ಡಾ. ಭರತ್ ಶೆಟ್ಟಿ, 15- ಮುನಿರತ್ನ, 16- ಬಸವರಾಜ ಮತ್ತಿಮೋಡ್, 17 -ಧೀರಜ್ ಮುನಿರಾಜು, 18- ಡಾ ಚಂದ್ರು ಲಮಾಣಿ ಅಮಾನತ್ತುಗೊಂಡ ಶಾಸಕರಾಗಿದ್ದಾರೆ.
ಸ್ಪೀಕರ್ ಯುಟಿ ಖಾದರ್ ಅವರು, ಸದಸ್ಯರನ್ನು ಅಮಾನತ್ತು ಮಾಡುತ್ತಿದ್ದಂತೆ ಸದನದ ಒಳಗೆ ಹಾಜರಾದ ಮಾರ್ಷಲ್‌ಗಳ ಗುಂಪು ಅಮಾನತ್ತುಗೊಂಡ ಶಾಸಕರನ್ನು ಹೊರಗೆ ಕಳುಹಿಸಲು ಮುಂದಾದರು.
ಸಿಎಂ ಉತ್ತರ ಕೊಡಲು ಬಿಡದ ವಿಪಕ್ಷಗಳು
ಅಮಾಮತುಗೊಂಡ 18 ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳು ಎತ್ತಿಗೊಂಡು ಸದನದಿಂದ ಹೊರಕ್ಕೆ ಕಳಿಸಿದರು. ಬಳಿಕ ಸಿಎಂ ಸಿದ್ದರಾಮಯ್ಯ ಅವರು, ಬಜೆಟ್ ಕುರಿತು ಉತ್ತರ ನೀಡಲು ಮುಂದಾದಾಗ ಸಿಎಂ ಭಾಷಣಕ್ಕೆ ವಿಪಕ್ಷಗಳು ಅಡ್ಡಿಪಡಿಸಿದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡುವುದನ್ನು ನಿಲ್ಲಿಸಿ ಲಿಖಿತ ಉತ್ತರ ಮಂಡಿಸಿದ್ದೇನೆ ಎಂದು ಉತ್ತರ ನೀಡುವುದನ್ನು ನಿಲ್ಲಿಸಿದರು
