



ಕೊ ಯಂಬತ್ತೂರಿನಲ್ಲಿ ಸೋಮವಾರ ನಡೆದ ಹಾವು ರಕ್ಷಣಾ ಕಾರ್ಯಾಚರಣೆಯ ವೇಳೆ ಕಾಳಿಂಗ ಸರ್ಪ ಕಚ್ಚಿದ ಪರಿಣಾಮ, 39 ವರ್ಷದ ಉರಗ ತಜ್ಞ ಕೆ. ಸಂತೋಷ್ ಕುಮಾರ್ ಅವರು ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮೂರು ದಿನಗಳ ಬಳಿಕ ಬುಧವಾರ ಸಾವನ್ನಪ್ಪಿದ್ದಾರೆ.
ಮಹಾರಾಣಿ ನಗರದ ನಿವಾಸಿಯಾಗಿದ್ದ ಕೆ. ಸಂತೋಷ್ ಕುಮಾರ್ ಅವರು ಕಳೆದ 15 ವರ್ಷಗಳಿಂದ ಹಾವು ರಕ್ಷಣೆ ಕಾರ್ಯದಲ್ಲಿ ತೊಡಗಿದ್ದರು. ಸೋಮವಾರ ವಡವಳ್ಳಿಯಲ್ಲಿ ಹಾವು ರಕ್ಷಿಸುವ ವೇಳೆ ಕಾಳಿಂಗ ಸರ್ಪ ಕಚ್ಚಿ, ಆಸ್ಪತ್ರೆಗೆ ದಾಖಲಾಗಿದ್ದರು. ಮೂರು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಸಾರಣ್ಯ, ವಿಶೇಷ ಚೇತನರಾದ 11 ವರ್ಷದ ಹಿರಿಯ ಪುತ್ರಿ ಮತ್ತು ಏಳು ವರ್ಷದ ಪುತ್ರಿಯನ್ನು ಅಗಲಿದ್ದಾರೆ.
