

ಅವನು ಸರಿಯಿಲ್ಲ.. ನಿನ್ನ ದುಡಿಮೆ ಮೇಲೆ ಬದುಕುತ್ತಾನೆ..ನಿನ್ನ ಸುಖವಾಗಿ ನೋಡಿಕೊಳ್ಳಲ್ಲ.. ಕಾಲಿಗೆ ಬೇಕಾದರೂ ಬೀಳುತ್ತೇನೆ.. ಹೋಗಬೇಡಮ್ಮ.. ಇದು ಲವರ್ ಜೊತೆ ಪರಾರಿಯಾಗುತ್ತಿದ್ದ ಮಗಳಿಗೆ ಅಸಾಹಯಕ ತಂದೆಯೋರ್ವ ಅಂಗಲಾಚುತ್ತಿರುವ ಪರಿ..
ಪ್ರೀತಿ ಎಂಬ ಮಾಯೆಗೆ ಬಿದ್ದ ಯುವಜನರು ತಂದೆತಾಯಂದಿರನ್ನೂ ದಿಕ್ಕರಿಸಿ ಪ್ರೇಮಿಗಳ ಜೊತೆ ಓಡಿ ಹೋಗುತ್ತಾರೆ.
ಬಹುತೇಕ ಪ್ರಕರಣಗಳಲ್ಲಿ ಆರಂಭದಲ್ಲಿ ಎಲ್ಲವೂ ಸರಿಇದ್ದರೂ ಸಂಸಾರ ಎಂದು ಬಂದಾಗ ನಾನಾ ರೀತಿಯ ಕಷ್ಟ ಪಡುತ್ತಾರೆ. ಆ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿದವರು ಸಕ್ಸಸ್ ಫುಲ್ ಜೋಡಿಯಾದರೆ, ಆ ಕಷ್ಟಗಳನ್ನು ಎದುರಿಸಲಾಗದೇ ಕೆಲವರು ದೂರಾಗುತ್ತಾರೆ. ಆದರೆ ಈ ಹಂತದಲ್ಲಿ ಮಕ್ಕಳ ಕಳೆದುಕೊಂಡು ಕೊರಗುವವರು ಮಾತ್ರ ಪೋಷಕರು.
ಅಂತಹುದೇ ಒಂದು ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾದ ಮಗಳ ಕಾಲಿಗೆ ಬಿದ್ದು, ನಮ್ಮನ್ನ ಬಿಟ್ ಹೋಗ್ಬೇಡ ಮಗಳೇ ಎಂದು ತಂದೆಯೋರ್ವ ಗೋಗರೆದಿದ್ದಾರೆ. ಯುವತಿಯೊಬ್ಬಳು ನಡು ರಾತ್ರಿಯಲ್ಲಿ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸಿದ್ದಾಳೆ.
ಸಂದರ್ಭದಲ್ಲಿ ಅಸಹಾಯಕ ತಂದೆ ಮಗಳ ಕಾಲಿಗೆ ಬಿದ್ದು, ದಯವಿಟ್ಟು ನಮ್ಮನ್ನು ಬಿಟ್ ಹೋಗ್ಬೇಡ ಮಗಳೇ ಎಂದು ಗೋಗರೆದಿದ್ದಾರೆ. ಇಲ್ಲಿ ಅಪ್ಪ ತನಗೆ ಮಗಳು ಬೇಕೆಂದು ಬಯಸಿದರೆ, ಮಗಳು ಮಾತ್ರ ಹೆತ್ತು-ಹೊತ್ತು ಸಾಕಿ ಸಲಹಿದ ತಂದೆ ತಾಯಿಯನ್ನೇ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾಗಿದ್ದಾಳೆ. ಈ ನಾಟಕೀಯ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಗಳು ತನ್ನ ಗೆಳೆಯನೊಂದಿಗೆ ನಡು ರಾತ್ರಿ ಓಡಿ ಹೋಗಲು ಯತ್ನಿಸಿದಾಗ, ಕಣ್ಣೀರಿಡುತ್ತಾ ಆಕೆಯ ಹಿಂದೆಯೇ ಬಂದ ತಂದೆ ಮಗಳ ಕಾಲಿಗೆ ಬಿದ್ದು ನಮ್ಮನ್ನು ಬಿಟ್ ಹೋಗ್ಬೇಡ ಮಗಳೇ ಎಂದು ಬೇಡಿಕೊಂಡಿದ್ದಾರೆ. ಈ ಮನಕಲಕುವ ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.
ತಮಿಳುನಾಡಿನಲ್ಲಿ ನಡೆದ ಘಟನೆಯ ಈ ವಿಡಿಯೋವನ್ನು ಪರಿಶೀಲಿಸಿದಾಗ ಇದು ನೈಜ ಘಟನೆಯಲ್ಲ ಬದಲಿಗೆ ಇದೊಂದು ಶಾರ್ಟ್ ಫಿಲ್ಮ್ ಎಂಬುದು ತಿಳಿದು ಬಂದಿದೆ.
