
ಕುಂದಾನಗರಿಯಲ್ಲಿ ಎಂಬಿಎ ಪದವೀಧರೆ ಆತ್ಮಹತ್ಯೆಗೆ (Self Harming) ಶರಣಾಗಿರುವ ಘಟನೆ ನಡೆದಿದೆ. ಬೆಳಗಾವಿಯ ನೆಹರು ನಗರದ ಪಿಜಿಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೂಸೈಡ್‌ಗೆ ಲವ್ ಬ್ರೇಕಪ್ ಕಾರಣವಾವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ವಿಜಯಪುರ ಜಿಲ್ಲೆಯ ಐಶ್ವರ್ಯಲಕ್ಷ್ಮೀ ಗಲಗಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಆತ್ಮಹತ್ಯೆಗೂ ಮುನ್ನ ಗೆಳತಿಯೊಂದಿಗೆ ಮಾತನಾಡಿ ರೂಮ್‌ಗೆ ಹೋಗಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಂಬಿಎ ಪದವಿ ಓದಿದ್ದ ಐಶ್ವರ್ಯ ಕಳೆದ ಮೂರು ತಿಂಗಳಿನಿಂದ ಸಾಯಿಕೃಪಾ ಪಿಜಿಯಲ್ಲಿದ್ದಕೊಂಡು, ಬೆಳಗಾವಿಯ ಎಕಸ್ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದಳು. ಆದರೆ, ಮಂಗಳವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದಕ್ಕೂ ಮುನ್ನಾ ಗೆಳತಿಯೊಂದಿಗೆ ಐಶ್ವರ್ಯ ಮಾತನಾಡಿ ಕಾಲ್ ಕಟ್ ಮಾಡಿದ್ದಳು. ನಂತರ ಪೋನ್ ರಿಸೀವ್ ಮಾಡದಿದ್ದಕ್ಕೆ ಪಿಜಿಗೆ ಗಾಬರಿಯಿಂದ ಬಂದಿದ್ದ ಸ್ನೇಹಿತ. ಸಿಸಿಟಿವಿಯಲ್ಲಿ ಐಶ್ವರ್ಯ ಸ್ನೇಹಿತ ಪಿಜಿಗೆ ಬರೋ ದೃಶ್ಯ ಸೆರೆಯಾಗಿದೆ. ಪಿಜಿ ರೂಮ್ ಬಾಗಿಲು ಒಡೆದು ನೋಡಿದಾಗ ಐಶ್ವರ್ಯಲಕ್ಷ್ಮೀ ಸೂಸೈಡ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಬಂದು ಪರಿಶೀಲಿಸಿದ್ದು, ಐಶ್ವರ್ಯ ಮೊಬೈಲ್ ಕಾಲ್ ಡಿಟೈಲ್ಸ್ ಪರಿಶೀಲನೆಗೆ ಮುಂದಾಗಿದ್ದಾರೆ. ಪಿಜಿಗೆ ಬಂದು ಹೋದ ಯುವತಿಯ ಸ್ನೇಹಿತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ






