ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ದುರಸ್ಥಿ ಆಗ್ರಹಿಸಿ ಪ್ರತಿಭಟನೆ
12 ದಿನಗಳ ಗಡು-ಪುತ್ತೂರು ಶಾಸಕರು “ಪೇಪರ್ ಟೈಗರ್” -ಸಂಜೀವ ಮಠಂದೂರು-ರಸ್ತೆಯನ್ನು ಬೇಕಾಬಿಟ್ಟಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ :ಅರುಣ್‌ಕುಮಾರ್ ಪುತ್ತಿಲ
ಪುತ್ತೂರು; ಉಪ್ಪಿನಂಗಡಿ -ಪುತ್ತೂರು ರಾಜ್ಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಅವಧಿ ಮುಗಿದು ಒಂದು ವರ್ಷವಾದರೂ ಇನ್ನೂ ಕುಂಟುತ್ತಾ ಸಾಗುತ್ತಿರುವುದನ್ನು ವಿರೋಧಿಸಿ ರಸ್ತೆ ದುರಸ್ಥಿಗೆ ಆಗ್ರಹಿಸಿ ಬಿಜೆಪಿ ಪಕ್ಷದ ವತಿಯಿಂದ ನೆಕ್ಕಿಲಾಡಿ ಸಮೀಪದ ಆದರ್ಶನಗರದಲ್ಲಿ ಸೋಮವಾರ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ…
