ಪುತ್ತೂರು: ನಿಮ್ಮ ಮನೆಯ ಕನಸು ನಮ್ಮಲ್ಲಿ ನನಸು ಎಂಬ ಧೈಯವಾಕ್ಯದೊಂದಿಗೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬಡಾವಣೆ ಮತ್ತು ಮನೆಗಳನ್ನು ನಿರ್ಮಿಸಿ, ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿರುವ ಜೊತೆಗೆ ಹಿರಿಯ ನಾಗರಿಕರಿಗೂ ವಿಶೇಷ ಬಡಾವಣೆಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸುತ್ತಿರುವ ದ್ವಾರಕಾ ಕಾರ್ಪೊರೇಷನ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನದ ವತಿಯಿಂದ 5ನೇ ವರ್ಷದ ದ್ವಾರಕೋತ್ಸವ ಫೆ.16 ರಂದು ಮುಕ್ರಂಪಾಡಿಯ ಗೋಕುಲ ಬಡಾವಣೆಯಲ್ಲಿ ನಡೆಯಲಿದೆ ಎಂದು ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ನಮ್ಮ ಕಂಪೆನಿಯ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನದ ಮೂಲಕ ದೈದಿಕ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ, ಯಕ್ಷಗಾನ, ಸಂಗೀತ, ಗೋಸೇವೆ ಮುಂತಾದ ಕ್ಷೇತ್ರಗಳಲ್ಲಿ ಸೇವೆಸಲಿಸುತ್ತಾ ಬದಿದ್ದೇವೆ. ವೇದ ಪುರಾಣ, ರಾಮಾಯಣ, ಮಹಾಭಾರತ, ಭಗವದ್ಗೀತೆ ಮುಂತಾದ ಸಾಹಿತ್ಯ ಅಧ್ಯಯನ, ನವೀನ ಜನಾಂಗದಲ್ಲಿ ಮುಂದುವರಿಯಲೆಂಬ ಆಶಯ ನಮ್ಮಲ್ಲಿದೆ. ಭಾರತೀಯ ಸಂಸ್ಕೃತಿಯ ಸಂರಕ್ಷಣೆ, ಅನುಷ್ಠಾನ ಮತ್ತು ಸಂವರ್ಧನೆ ನಮ್ಮ ಧೈಯವಾಗಿದೆ. ಆರ್ಥಿಕ ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡ ನಾನು ನಮ್ಮ ಆದಾಯದ ಒಂದಷ್ಟು ಭಾಗವನ್ನು ಇಂತಹ ಕಾರ್ಯಕ್ರಮಗಳಲ್ಲಿ ವಿನಿಯೋಗಿಸುತ್ತಿದ್ದೇವೆ ಎಂದ ಅವರು ಫೆ.16ಕ್ಕೆ 5ನೇ ವರ್ಷದ ದ್ವಾರಕೋತ್ಸವಹಸರಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮಗಳು: ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ ಭಟ್ ಕುಂಬ್ಳೆ ಮಾತನಾಡಿ ಬೆಳಗ್ಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಕಾಠ್ಯಕ್ರಮ ಉದ್ಘಾಟಿಸಲಿದ್ದಾರೆ. ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ಟ ತ್ವ ಅತ್ಯಗತ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಕ್ಕಳ ತಜ್ಞೆ ಡಾ. ಸುಲೇಖಾ ವರದರಾಜ್, ಹಿರಿಯ ಆರ್ಥಿಕ ತಜ್ಞ ವಿಶ್ವೇಶ್ವರ ಭಟ್ ಬಂಗಾರಡ್ಡಿ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಾವಯವ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸುಬ್ರಹ್ಮಣ್ಯ ಪ್ರಸಾದ ಭಟ್ ನೆಕ್ಕರಕಳೆಯ, ಭಾರತೀಯ ಸೇನೆ ಮತ್ತು ಕೃಷಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಡಾ. ಗೋಪಾಲಕೃಷ್ಣ ಕಾಂಚೋಡು, ಯಕ್ಷಗಾನದ ಹಿಮ್ಮೇಳ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್, ವೈಜ್ಞಾನಿಕ ಸಂಶೋಧಕ ಸ್ವಸ್ತಿಕ್ ಪದ್ಮ ಮುರ್ಗಜೆ, ಸಾಮಾಜಿಕ ಜಾಲತಾಣ ಮತ್ತು ಆಹಾರೋದ್ಯಮದ ಕುರಿತು ಪ್ರಸಾರ ಮಾಡುತ್ತಿರುವ ಭಟ್ ಆ್ಯಂಡ್ ಭಟ್ ಸುದರ್ಶನ ಭಟ್ ಬೆದ್ರಡಿ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಹೊಸ ಪುಸ್ತಕಗಳ ಬಿಡುಗಡೆ: ದ್ವಾರಕಾ ಪ್ರಕಾಶನದ ಮೂಲಕ ಹೊರ ಬಂದಿರುವ ಹೊಸ ಪುಸ್ತಕಗಳ ಬಿಡುಗಡೆ ನಡೆಯಲಿದೆ. ವಿದ್ವಾನ್ ಗ.ನಾ ಭಟ್ ಮೈಸೂರು ಅವರ ಕೃತಿ ಸತೀ ಸಾವಿತ್ರಿ ಕಾದಂಬರಿ ಮತ್ತು ಕೃಷ್ಣಮೂರ್ತಿ ಕಮ್ಮಾರ ಅವರ ಕೃತಿ ಪುರಾಣ ರಸಪ್ರಶ್ನಾವಲೀಯನ್ನು ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್.ಜಿ ಅವರು ಬಿಡುಗಡೆ ಮಾಡಲಿದ್ದಾರೆ. ವೇ.ಮೂ. ಬ್ರಹ್ಮಶ್ರೀ ಮಿತ್ತೂರು ಪುರೋಹಿತ ಶ್ರೀನಿವಾಸ ಭಟ್ ಅವರ ವೇದವಸಂತ ಮತ್ತು ವೇವಮಾಧವ ಎಂಬ ಕೃತಿಯ ಬಿಡುಗಡೆ ನಡೆಯಲಿದೆ. ನರಿಮೊಗರು ಸರಸ್ವತಿ ವಿದ್ಯಾ ಮಂದಿರ ಅಧ್ಯಕ್ಷ ಅವಿನಾಶ ಕೊಡಂಕಿರಿ, ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬಿ., ಯುವ ಬರಹಗಾರ ಉಪ್ಪಿನಂಗಡಿಯ ನವೀನಕೃಷ್ಣ ಎಸ್. ಅವರು ಕೃತಿ ಪರಿಚಯ ಮಾಡಲಿದ್ದಾರೆ ಎಂದು ಗಣರಾಜ ಭಟ್ ಕುಂಬ್ಳೆ ಹೇಳಿದರು.

ಕೃಷಿ, ಆರ್ಥಿಕ ವಿಚಾರಗೋಷ್ಠಿ: ಬೆಳಗ್ಗೆ ಗಂಟೆ 11.30ಕ್ಕೆಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿಯಲ್ಲಿ ಗೋಪಾಲಕೃಷ್ಣ ಕಾಂಚೋಡು ಮತ್ತು ವಿಶ್ವೇಶ್ವರ ಭಟ್ ಬಂಗಾರಡ್ಕ ಹಾಗು ಸುಬ್ರಹ್ಮಣ್ಯ ಪ್ರಸಾದ ಭಟ್ ನೆಕ್ಕರಕಳೆಯ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಗಣರಾಜ ಭಟ್ ಕುಂಬ್ಳೆ ಮಾಹಿತಿ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಮಧ್ಯಾಹ್ನ ಗಂಟೆ 1ರಿಂದ ಬಾಬು ಕಾಟುಕುಕ್ಕೆ ಮತ್ತುದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳಿಂದ ಕಿಬೋರ್ಡ್ ವಾದನ, ಮಧಾಹ್ನ ಗಂಟೆ 2ರಿಂದ ಯಕ್ಷಗಾನ ತಾಳದುದ್ದಳೆ ಚೂಡಾಮಣಿ ಪ್ರಸಂಗ ನಡೆಯಲಿದೆ. ಸಂಜೆ ಗಂಟೆ 4ರಿಂದ ವಿದ್ವಾನ್ ವೆಂಕಟಕೃಷ್ಣ ಭಟ್ ಗುಂಡ್ಯಡ್ಕ ಮತ್ತು ಬಳಗದವರಿಂದ ಭಾವಗಾನಲಹರಿ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 6ರಿಂದ ಶ್ರೀ ಮೂಕಾಂಬಿಕಾ ಕಲ್ಲರಲ್ ಅಕಾಡೆಮಿಯ ಕಲಾದೀಪ ವಿದ್ವಾನ್ ದೀಪಕ್ ಕುಮಾರ್ ಮತ್ತು ಅವರ ಶಿಷ್ಯರಿಂದ ದಮಧುರಾಕೃತಿ- ಶ್ರೀಕೃಷ್ಣ ಲೀಲೆಗಳು ಎಂಬ ಭರತನಾಟ್ಯ ನೃತ್ಯಪ್ರದರ್ಶನ ನಡೆಯಲಿದೆ ಎಂದು ಗಣರಾಜ ಭಟ್ ಕುಂಬ್ಳೆ ಹಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಿಬ್ಬಂದಿ ದುರ್ಗಾಗಣೇಶ್ ಉಪಸ್ಥಿತರಿದ್ದರು.

ಸೈಟ್‌ಗಳ ಮೇಲೆ ಶೇ.10 ರಿಯಾಯಿತಿ:ಅಮೃತಕೃಷ್ಣ
ನಿರ್ದೇಶಕರು ದ್ವಾರಕಾ ಕಾರ್ಪೊರೇಷನ್ ಪ್ರೈವೆಟ್ ಲಿ.a

ನಿಮ್ಮ ಮನೆಯ ಕನಸು ನಮ್ಮಲ್ಲಿ ನನಸು ಎಂಬ ಧೈಯವಾಕ್ಯದೊಂದಿಗೆ ಮನೆ, ಬಡವಾಣೆಗಳ ನಿರ್ಮಾಣ ಹಾಗೂ ಸೈಟ್ ಗಳನ್ನು ಕೊಡುತ್ತಾ ಬಂದಿದ್ದೇವೆ. ನಮ್ಮ ಸಾವಿರಾರು ಮಂದಿ ಗ್ರಾಹಕರನ್ನು ಸೇರಿಸಿಕೊಂಡು ವಾರ್ಷಿಕೋತ್ಸವ ಹಮ್ಮಿಕೊಂಡಿರುವ ಸಂದರ್ಭದಲ್ಲಿ ನಾವು ವಿಶೇಷ ಆಕರ್ಷಣೆಯಾಗಿ ನಮ್ಮ ಸೈಟ್‌ಗಳನ್ನು ಬುಕ್ ಮಾಡುವವರಿಗೆ ಶೇ.10 ರಿಯಾಯಿತಿಯನ್ನು ನೀಡುತ್ತಿದ್ದೇವೆ. ಮುಂದೆ ಬುಕ್ ಮಾಡುವವರಿಗೂ ರೂ.10ಸಾವಿರದ ಗಿಫ್ಟ್ ಕೂಪನ್ ಕೂಡಾ ನೀಡುತ್ತೇವೆ. ಎಲ್ಲರೂ ಇದರ ಸದುಪಯೋಗ ಪಡೆಯುವಂತೆ ವಿನಂತಿ

Leave a Reply

Your email address will not be published. Required fields are marked *

Join WhatsApp Group
error: Content is protected !!