ಉಪ್ಪಿನಂಗಡಿ: ವಿದ್ಯಾರ್ಥಿನಿ ಪ್ರಿಯಾಂಕಾ ನಿಧನ
ಕೊಕ್ಕಡ: ಎಂಟು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ವೆಸ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನ.5ರಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ. ಕೊಕ್ಕಡ ಹಳ್ಳಿಂಗೇರಿ ನಿವಾಸಿ ಪೌಲೋ ಡಿಸೋಜ – ಗ್ರೇಸಿ ಡಿಸೋಜ ದಂಪತಿ ಪುತ್ರಿ ಪ್ರಿಯಾಂಕಾ…
ಹಸೆಮಣೆ ಏರಬೇಕಿದ್ದ ಪೊಲೀಸ್ ಕಾನ್ಸ್ಟೇಬಲ್ ಬರ್ಬರ ಹತ್ಯೆ: ಆಮಂತ್ರಣ ಪತ್ರಿಕೆ ಹಂಚಿ ಬರುವಾಗ ಅಡ್ಡಗಟ್ಟಿ ಕೃತ್ಯ
ಹಾ ಸನ, ನ.5: ಕಾನ್ ಸ್ಟೇಬಲ್ ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ತಾಲೂಕಿನ ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್ನಲ್ಲಿ ರವಿವಾರ ರಾತ್ರಿ ನಡೆದಿದೆ.ಬಾಗೇಶಪುರ ಗ್ರಾಮದ ಪೊಲೀಸ್ ಕಾನ್ ಸ್ಟೇಬಲ್ ಹರೀಶ್ ವಿ.(32) ಕೊಲೆಯಾದವರು.…
ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ಬೆಂಗಳೂರು : ನಗರದ ಕೋಣನಕುಂಟೆ ಯಲ್ಲಿ ದೀಪಾವಳಿಯ ಸಂದರ್ಭದಲ್ಲಿ ಸ್ನೇಹಿತರು ಹೇಳಿದರೆಂದು ಪಟಾಕಿಯ ಬಾಕ್ಸ್ ಮೇಲೆ ಕುಳಿತುಕೊಂಡ ಯುಕನೊಬ್ಬ ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತ ಯುವಕ ಶಬರೀಶ್ ಎಂಬಾತನಾಗಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಶಬರೀಶ್, ಕುಡಿದ ಮತ್ತಿನಲ್ಲಿದ್ದ ತನ್ನ ಆರು…
ಚಾರ್ಮಾಡಿ ಘಾಟ್ : ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
ಮೂ ಡಿಗೆರೆ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬಂಡೆಕಲ್ಲಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಮೂವರು ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಸೋಮವಾರ(ನ.4) ನಡೆದಿದೆ. ಕಾರು ಉಜಿರೆಯಿಂದ ಮೂಡಿಗೆರೆ ಮಾರ್ಗವಾಗಿ ಸಾಗುತ್ತಿದ್ದ ವೇಳೆ…
ಪಟಾಕಿ ಸಿಡಿಸುವಾಗ ಸ್ನೇಹಿತರ ಹುಚ್ಚಾಟಕ್ಕೆ ಯುವಕ ಬಲಿ, 6 ಮಂದಿ ಬಂಧನ; Video Viral
ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಸಾಕಷ್ಟು ಪ್ರಕರಣಗಳಲ್ಲಿ ಹಲವರಿಗೆ ಕುತ್ತಾಗಿದ್ದು, ಪಟಾಕಿ ಸಿಡಿಸುವ ವೇಳೆ ಸ್ನೇಹಿತರ ಹುಚ್ಚಾಟಕ್ಕೆ ಯುವಕನೋರ್ವ ಬಲಿಯಾದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕನೋರ್ವ ಬಲಿಯಾದ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದ್ದು, ಪ್ರಕರಣ…
‘ಉಂದು ಪೆರ್ಮರಿ ಅತ್ತ್.. ಕೋರಿ ಮರ್ಲೆ..!’-‘ಬೀಲ ಪತ್ಲೆ.. ಯಾನ್ ಮಂಡೆ ಪತ್ತುವೆ..’ – ಶೋಭಕ್ಕನ ‘ಅಪರೇಷನ್ ಪೆರ್ಮರಿ!’
‘ಗೋಣಿ ಬುಡ್ಪಲೆ ಬಶೀರಾಕ..’ – ಶೋಭಕ್ಕನ ಧೈರ್ಯೊಗೊಂಜಿ ಸಲಾಂ..!
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಸುಳ್ಯದಗಡಿಪ್ರದೇಶವೊಂದರಲ್ಲಿ ಮಹಿಳೆಯೊಬ್ಬರು ಬೃಹತ್ ಗಾತ್ರದ ಹೆಬ್ಬಾವೊಂದನ್ನು ಹಿಡಿದ ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ. ಗಂಡಸಿಗೂ ಇರದ ಧೈರ್ಯ ಆ ವೀರ ಮಹಿಳೆ ಶೋಭಕ್ಕ ಎಂಬವರು ಹೆಬ್ಬಾವನ್ನ ಹಿಡಿಯುವ ಮೂಲಕ ತೋರಿಸಿ ಕೊಟ್ಟಿದ್ದಾರೆ. ಈ ಹೆಬ್ಬಾವಿಗೆ…
ಕೆದಂಬಾಡಿ ಗ್ರಾಮ ಪಂಚಾಯತ್ ಉಪ ಚುನಾವಣೆ – SDPI ವತಿಯಿಂದ ಚುನಾವಣಾ ಪೂರ್ವ ಭಾವಿ ಸಭೆ : ಅಭ್ಯರ್ಥಿ ಘೋಷಣೆ
ನವೆಂಬರ್-02. ರಾಜ್ಯ ಸರಕಾರವು ಈಗಾಗಲೇ ತೆರವಾಗಿರುವ ಗ್ರಾಮ ಪಂಚಾಯತ್ ಸದಸ್ಯರ ಸ್ಥಾನಕ್ಕೆ ರಾಜ್ಯಾದ್ಯಂತ ಉಪಚುನಾವಣೆ ಘೋಷಣೆ ಮಾಡಿರುವುದರಿಂದ ಪುತ್ತೂರು ಕ್ಷೇತ್ರ ವ್ಯಾಪ್ತಿಯ ಕೆದಂಬಾಡಿ ಗ್ರಾಮ ಪಂಚಾಯತಿನಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ಸ್ಪರ್ಧಿಸುವುದಾಗಿ ತೀರ್ಮಾನಿಸಿದ್ದು,…
ಸಮಸ್ತದ ಪಾರಂಪರಿಕ ತತ್ವ ಸಂದೇಶಗಳು ಶಾಂತಿ ನೆಲೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ;ಅಲವಿ ದಾರಿಮಿ ಕುಝಿಮಣ್ಣ
ವಿಟ್ಲ; ಇಸ್ಲಾಮಿನ ಪಾರಂಪರಿಕ ತತ್ವ ಸಿದ್ದಾಂತಗಳನ್ನು ಪ್ರತಿಪಾದಿಸುತ್ತಿರುವ ಉಲಮಾ ಸಂಘಟನೆ “ಸಮಸ್ತ”ಒಕ್ಕೂಟದ ಕಾರ್ಯ ಚಟುವಟಿಕೆಗಳು ದೇಶದಲ್ಲಿ ಶಾಂತಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.ಧಾರ್ಮಿಕ ಗ್ರಂಥಗಳ ಬಾಹ್ಯಾರ್ಥವನ್ನು ಮಾತ್ರ ಕಲಿತು ಅದರ ತಿರುಳನ್ನು ಅರ್ಥ ಮಾಡಿ ಕೊಳ್ಳದ ಜನರಿಂದಾಗಿ ಧರ್ಮಕ್ಕೆ…
ಕೆನಡಾ: ಪೊಲೀಸರಿಂದ ಹಿಂದೂಗಳ ಮೇಲೆ ನಡೀತಿದೆ ಭೀಕರ ಹಲ್ಲೆ-ಮತ್ತೊಂದು ಶಾಕಿಂಗ್ ವಿಡಿಯೋ ವೈರಲ್
ಒಟ್ಟಾವಾ: ಕೆನಡಾದ (Canada) ಬ್ರಾಂಪ್ಟನ್ (Brampton) ನಗರದಲ್ಲಿರುವ ಹಿಂದೂ ದೇವಾಲಯವೊಂದರ ಮೇಲೆ ಖಲಿಸ್ತಾನಿ ಗುಂಪು (Khalistani attack) ಭಾನುವಾರ ದಾಳಿ ಮಾಡಿ ಹಿಂದೂಗಳ ಮೇಲೆ ಹಲ್ಲೆ ನಡೆಸಿತ್ತು. ಪರಿಸ್ಥಿತಿ ವಿಕೋಪಕ್ಕೇರಿದಾಗ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಈಗ ಪೊಲೀಸರೇ ಹಿಂದುಗಳ ಮೇಲೆ ಹಲ್ಲೆ…
