Author: Vidyamaana

ಮಂಗಳೂರು ಸುರೇಂದ್ರನ್ ಕೊಲೆ ಪ್ರಕರಣ: ಓರ್ವನಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬ ಖುಲಾಸೆ

ಮಂಗಳೂರು: ಕೆಲಸದ ಹಣದ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.…

ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ, ₹54 ಸಾವಿರ ದಂಡ..!!

ಮಂಗಳೂರು:ಮಹಿಳೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿ, ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹54 ಸಾವಿರ ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್…

ವಿದ್ಯಾರ್ಥಿನಿ ಅಪಹರಣ ಪ್ರಕರಣ: ಕಣಚೂರು ಮೆಡಿಕಲ್ ಕಾಲೇಜು ಡೀನ್ ಸ್ಪಷ್ಟನೆ

ಉಳ್ಳಾಲ: ಕಣಚೂರು ಮೆಡಿಕಲ್ ಕಾಲೇಜಿನ ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಯೊಬ್ಬರನ್ನು ಬಲವಂತವಾಗಿ ಕರೆದೊಯ್ದ ಘಟನೆ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆ ಕಾಲೇಜಿನ ಡೀನ್ ಡಾ. ಶಾನವಾಝ್ ಮಾನಿಪ್ಪಾಡಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿನಿಯ ಅಪಹರಣ ನಡೆದಿಲ್ಲ. ಆಕೆಯ ಸಂಬಂಧಿಕರೇ ಕರೆದೊಯ್ದಿದ್ದು, ಈ ವಿಚಾರ…

ನ.22: ಅಶೋಕ ಜನಮನದ ಸಂಭ್ರಮ: ಒಂದು ಲಕ್ಷ ಜನರಿಗೆ ವಸ್ತ್ರದಾನ,ಸುಮಾರು ₹4 ಕೋಟಿ ವೆಚ್ಚ; ನಿರಂತರವಾಗಿ ದೋಸೆ ವಿತರಣೆ-60 ಸಾವಿರಕ್ಕೂ ಅಧಿಕ ಮಂದಿಗೆ ಸಹಭೋಜನ-ಗೂಡುದೀಪ ಸ್ಪರ್ಧೆ-ರಾಜಕೀಯ, ವೈಯಕ್ತಿಕ ಲಾಭದ ಉದ್ದೇಶವಿಲ್ಲ: ಅಶೋಕ್ ರೈ-ಸೇವೆಯಲ್ಲಿ ಧನ್ಯತಾ ಭಾವವಿದೆ: ಸುಮಾ ಅಶೋಕ್ ರೈ

ಪುತ್ತೂರು: ದೀಪಾವಳಿ ಹಬ್ಬದ ಸಂಭ್ರಮವನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳುವ ಆಶಯದೊಂದಿಗೆ ರೈ ಎಸ್ಟೇಟ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಆಶ್ರಯದಲ್ಲಿ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಆಯೋಜಿಸಲಾಗಿರುವ ವಾರ್ಷಿಕ ದೀಪಾವಳಿ ವಸ್ತ್ರದಾನ ಹಾಗೂ ಸಹಭೋಜನ ಕಾರ್ಯಕ್ರಮ ‘ಅಶೋಕ ಜನಮನ-2026’ ಇಂದು…

ಇಂದು (ನ.21) ಪಂಜಳದ ಸಾಲ್ಮರ ಆಯುರ್ವೇದ ಕ್ಲಿನಿಕ್‌ನಲ್ಲಿ ಉಚಿತ ಮೂಲವ್ಯಾಧಿ ಚಿಕಿತ್ಸಾ ಶಿಬಿರ

ಪುತ್ತೂರು: ವಿಶ್ವ ಮೂಲವ್ಯಾಧಿ ದಿನಾಚರಣೆಯ ಅಂಗವಾಗಿ ಪಂಜಳ ಜಂಕ್ಷನ್‌ನಲ್ಲಿರುವ ಸಾಲ್ಮರ ಆಯುರ್ವೇದ ಸಂಸ್ಥೆಯ ಸಭಾಂಗಣದಲ್ಲಿ ನ.21ರಂದು ಉಚಿತ ಮೂಲವ್ಯಾಧಿ ಚಿಕಿತ್ಸಾ ಶಿಬಿರ ನಡೆಯಲಿದೆ. ಸಾಲ್ಮರ ಆಯುರ್ವೇದ ಸಂಸ್ಥೆಯ ಸಂಸ್ಥಾಪಕ, ಪಾರಂಪರಿಕ ನಾಟಿ ವೈದ್ಯ ಶಂಸುದ್ದೀನ್ ಸಾಲ್ಮರ್ ಅವರ ನೇತೃತ್ವದಲ್ಲಿ ನಡೆಯುವ ಶಿಬಿರವು…

ಮಂಗಳೂರು -ಕಣಚೂರು ಕಾಲೇಜಿನಿಂದ ಅಪಹರಣ ಪ್ರಕರಣ: ಕೇರಳದಲ್ಲಿ ಯುವತಿ ಪತ್ತೆ, ಕುಟುಂಬದೊಂದಿಗೆ ತೆರಳಲು ನಿರಾಕರಣೆ..!!

ಮಂಗಳೂರು, ನ.20: ನಗರದ ಹೊರವಲಯದ ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನ ಆವರಣದಿಂದ ಯುವತಿಯೊಬ್ಬಳನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳದಲ್ಲಿದ್ದ ಯುವತಿಯನ್ನು ಉಳ್ಳಾಲ ಪೊಲೀಸರು ರಕ್ಷಿಸಿದ್ದಾರೆ. ಯುವತಿಯನ್ನು ಕೇರಳದಲ್ಲಿರುವ ಆಕೆಯ ಸಂಬಂಧಿಕರ ಮನೆಯಿಂದ ಪೊಲೀಸರು ಪತ್ತೆಹಚ್ಚಿ ರಕ್ಷಿಸಿದ್ದು, ಆಕೆಯ ಹೇಳಿಕೆಯನ್ನು…

ಕರ್ನಾಟಕ ಮಿನಿ ಒಲಿಂಪಿಕ್ಸ್‌ನಲ್ಲಿ ದಕ್ಷಿಣ ಕನ್ನಡಕ್ಕೆ ಕಬಡ್ಡಿ ಚಾಂಪಿಯನ್ ಪಟ್ಟ -14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಜೇಯ ಸಾಧನೆ; ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಹಾರ್ದಿಕ ಪಿ. ನಾಯಕತ್ವದ ತಂಡಕ್ಕೆ ಪ್ರಶಸ್ತಿ..!!

ಪುತ್ತೂರು: ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ 5ನೇ ಕರ್ನಾಟಕ ಮಿನಿ ಒಲಿಂಪಿಕ್ಸ್ ಪಂದ್ಯಕೂಟದಲ್ಲಿ 14 ವರ್ಷದೊಳಗಿನ ಬಾಲಕಿಯರ ಕಬಡ್ಡಿ ವಿಭಾಗದಲ್ಲಿ ದಕ್ಷಿಣ ಕನ್ನಡ…

ಪುತ್ತೂರು:ನ.20-ಸೇಂಟ್ ಫಿಲೋಮಿನಾ ಪಿಯು ಕಾಲೇಜಿನ ನೂತನ ಹೆಚ್ಚುವರಿ ಕಟ್ಟಡದ ಉದ್ಘಾಟನೆ..!!

ಪುತ್ತೂರು: ದರ್ಬೆಯ ಫಿಲೋನಗರದಲ್ಲಿರುವ ಸೇಂಟ್ ಫಿಲೋಮಿನಾ ಪದವಿಪೂರ್ವ ಕಾಲೇಜಿನ ನೂತನ ಹೆಚ್ಚುವರಿ ಕಟ್ಟಡದ ಆಶೀರ್ವಚನ ಹಾಗೂ ಉದ್ಘಾಟನಾ ಸಮಾರಂಭ ನ. 20ರಂದು ಬೆಳಗ್ಗೆ 11 ಗಂಟೆಗೆ ಕಾಲೇಜಿನ ನೂತನ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದ ಆಶೀರ್ವಚನವನ್ನು ಕೆಥೋಲಿಕ್ ಬೋರ್ಡ್ ಆಫ್ ಎಜುಕೇಶನ್ (CBE)…

ನೇರಳಕಟ್ಟೆ: ಲಾರಿ ಡಿಕ್ಕಿ ಹೊಡೆದು 9ನೇ ತರಗತಿ ವಿದ್ಯಾರ್ಥಿನಿ ಮೃತ್ಯು..!!

ನೇರಳಕಟ್ಟೆ: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ ಹೊಡೆದು, ಲಾರಿ ಹರಿದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಾಣಿ ಸಮೀಪದ ನೇರಳಕಟ್ಟೆಯಲ್ಲಿ ನ. 19ರಂದು ಸಂಜೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ನೇರಳಕಟ್ಟೆ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಇಲ್ಯಾಸ್ ಅವರ…

ಮಡಂತ್ಯಾರು ಜ್ಯುವೆಲ್ಲರಿ ಅಂಗಡಿಯಲ್ಲಿ ₹4.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಆಭರಣ ಖರೀದಿಸುವ ನೆಪದಲ್ಲಿ ಬಂದ ಇಬ್ಬರು ಅಪರಿಚಿತರಿಂದ ಕೃತ್ಯ..!!

ಬೆಳ್ತಂಗಡಿ: ಆಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ಮಾಲೀಕರ ಗಮನಕ್ಕೆ ಬಾರದಂತೆ ಸುಮಾರು ₹4.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲ್ಲಿ ನಡೆದಿದೆ. ಮಡಂತ್ಯಾರು ನಿವಾಸಿ ರಾಜೇಶ್ (43) ಎಂಬವರಿಗೆ ಸೇರಿದ…

Join WhatsApp Group
error: Content is protected !!