Category: ಕರಾವಳಿ

ಬೊಳ್ವಾರು- ಅ. 16:ಆಕಾಶ್ ಫುಟ್‌ವೇರ್ ಶುಭಾರಂಭ..!!

ಪುತ್ತೂರು: ಇಲ್ಲಿನ ಆರ್.ಎಚ್. ಸೆಂಟರ್ ಮುಂಭಾಗ ತಾಜ್ ಕಾಂಪ್ಲೆಕ್ಸ್ ,ಬೊಳ್ವಾರ್ ನಲ್ಲಿ ಹೊಸ ಪಾದರಕ್ಷೆ ಮಳಿಗೆಯಾದ AKASH FOOTWEAR ತನ್ನ ಹೊಸ ಶಾಖೆಯನ್ನು ಅ. 16 ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ. ನೂತನ ಮಳಿಗೆಯ ಉದ್ಘಾಟನೆಯನ್ನು ಸಂಸ್ಥೆಯ ಮಾಲಕರ…

ಮಾರಿಷಸ್‌ನಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ ಸುಳ್ಯ ಮೂಲದ ವಿದ್ಯಾರ್ಥಿ ಕಾಲುಜಾರಿ ಬಿದ್ದು ದುರ್ಮರಣ

ಪುತ್ತೂರು, ಅ.14: ಸುಳ್ಯ ಮೂಲದ ಯುವಕನೊಬ್ಬ ಮಾರಿಷಸ್‌ನಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಮೃತನನ್ನು ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಕಲ್ಲಾಜೆ ನಿವಾಸಿ ಜಯಲಕ್ಷ್ಮಿ ಅವರ ಪುತ್ರ ನಂದನ್ ಎಸ್. ಭಟ್ (25) ಎಂದು…

ಕಂಬಳಕ್ಕೆ ರಾಜ್ಯ ಕ್ರೀಡಾ ಪ್ರಾಧಿಕಾರದ ಅಧಿಕೃತ ಮಾನ್ಯತೆ-ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪುತ್ತೂರು ಕಂಬಳ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಆಯ್ಕೆ

ಪುತ್ತೂರು:ಕರ್ನಾಟಕ ಕ್ರೀಡಾ ಪ್ರಾಧಿಕಾರವು ಕರಾವಳಿಯ ಜನಪದ ಕ್ರೀಡೆಯಾದ ಕಂಬಳ ಕ್ರೀಡೆಗೆ ಅಧಿಕೃತ ಮಾನ್ಯತೆ ನೀಡಿದೆ.‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌’ಗೆ ರಾಜ್ಯ ಕ್ರೀಡಾ ಸಂಸ್ಥೆಯಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ ಎಂದು ಇಲಾಖೆಯ ಆಯುಕ್ತ ಚೇತನ್‌ ಆರ್. ತಿಳಿಸಿದ್ದಾರೆ.…

ಅ.15: ಪುತ್ತೂರಿನಲ್ಲಿ ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ..!!-“ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ” ಮೂಲಕ ದುಶ್ಚಟಮುಕ್ತ ಸಮಾಜ ನಿರ್ಮಾಣ..!!

ಪುತ್ತೂರು, ಅ.13:ಗಾಂಧಿ ಜಯಂತಿ ಸಂಭ್ರಮಾಚರಣೆಯ ಅಂಗವಾಗಿ ದುಶ್ಚಟಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಅಕ್ಟೋಬರ್…

ಅಶೋಕ ಜನಮನ 2025: ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಕಾರ್ಯಕ್ರಮಕ್ಕೆ ಬರುವ ಪ್ರತೀಯೊಬ್ಬರೂ ಅನ್ನದಾನವನ್ನು ಸ್ವೀಕರಿಸುವಂತೆ ನೋಡಿಕೊಳ್ಳಿ: ಶಾಸಕ ಅಶೋಕ್ ರೈ ಸೂಚನೆ

ಪುತ್ತೂರು: ಅಶೋಕ ಜನಮನ ಕಾರ್ಯಕ್ರಮಕ್ಕೆ ಬರುವ ಪ್ರತೀಯೊಬ್ಬರೂ ನಮ್ಮ ಅತಿಥಿಗಳು ,ಅವರ‌ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಿ ಮತ್ತು ಬರುವ ಪ್ರತೀಯೊಬ್ಬರೂ ಅನ್ನದಾನ ದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು, ಯಾರೂ ಊಟ ಸಿಗದೆ ಇರುವಂತಾಗಬಾರದು ಎಂದು ಶಾಸಕರು‌ಸೂಚನೆಯನ್ನು ನೀಡಿದ್ದಾರೆ.ಶಾಸಕರ ಕಚೇರಿ ಸಭಾಂಗಣದಲ್ಲಿ ಅಶೋಕ ಜನಮನದ ಪೂರ್ವಭಾವಿ…

ರಾಜ್ಯ ಸರಕಾರದಿಂದ ಅನ್ನಭಾಗ್ಯದ ಜೊತೆಗೆ ಇಂದಿರಾ ಕಿಟ್,
ಮುಂದಿನ ದಿನಗಳಲ್ಲಿ ಬಡವರಿಗೆ ನೆಮ್ಮದಿಯ ಬದುಕು : ಶಾಸಕ ಅಶೋಕ್ ರೈ

ಪುತ್ತೂರು:ಕರ್ನಾಟಕ ರಾಜ್ಯ ಸರಕಾರವು ಅನ್ನಭಾಗ್ಯ ಯೋಜನೆಯಡಿ “ಇಂದಿರಾ ಕಿಟ್” ವಿತರಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದು ಬಡ ಜನತೆಗೆ ನೆಮ್ಮದಿ ಮತ್ತು ಆಶಾದೀಪವಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಶಾಸಕರು ಗುರುವಾರ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದರು…

ಅ.10-11ಪುತ್ತೂರು: ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ..!!

ಪುತ್ತೂರು:ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಆಂಟನಿ ಪತ್ರಾವೋರವರ ಸ್ಮರಣಾರ್ಥವಾಗಿ ಆಯೋಜಿಸಲಾದ ವಾರ್ಷಿಕ ಕ್ರೀಡಾಕೂಟ – 2025 ಅಕ್ಟೋಬರ್ 10 ಮತ್ತು 11ರಂದು ಪುತ್ತೂರಿನ ದರ್ಬೆ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಜರಗಲಿದೆ. ಉದ್ಘಾಟನಾ ಸಮಾರಂಭ ಅ.10ರಂದು ಬೆಳಿಗ್ಗೆ…

ಉದ್ಯೋಗ ಖಾತರಿ ಫಲಾನುಭವಿಗಳ ಇ-ಕೆವೈಸಿ ಕಡ್ಡಾಯ-ಅ.30ರೊಳಗೆ ಪೂರ್ಣಗೊಳಿಸಲು ಸೂಚನೆ

ಪುತ್ತೂರು:ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಡಿ ಕೆಲಸ ಮಾಡುತ್ತಿರುವ ಕೂಲಿಕಾರರ ಆಧಾರ್‌ ಇ-ಕೆವೈಸಿ ಪ್ರಕ್ರಿಯೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಅಕ್ಟೋಬರ್‌ 30ರೊಳಗೆ ಎಲ್ಲಾ ಸಕ್ರಿಯ ಉದ್ಯೋಗ ಚೀಟಿದಾರರು ಇ-ಕೆವೈಸಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.…

ಉಳ್ಳಾಲ ಶಾರದೋತ್ಸವ ಮೆರವಣಿಗೆ ವಿವಾದ – ಪೊಲೀಸ್ ಆಯುಕ್ತರ ಸ್ಪಷ್ಟನೆ – ಮೊಗವೀರ ಸಮುದಾಯವನ್ನು ಪ್ರಚೋದಿಸಲು ಕೆಲವರ ಯತ್ನ – ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು:ಉಳ್ಳಾಲ ಶಾರದೋತ್ಸವದ ವಿಸರ್ಜನ ಮೆರವಣಿಗೆಗೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಕುರಿತು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದರು. “ಕೆಲವರು ತಮ್ಮ ಲಾಭಕ್ಕಾಗಿ ಮೊಗವೀರ ಸಮುದಾಯದವರನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ನಿಜವಾಗಿ ಸಹಾಯ ಮಾಡಬೇಕೆಂದರೆ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ…

ಪೋಷಕರೇ ಗಮನಿಸಿ, ಎಲ್ಲ ಶಾಲೆ ಮಕ್ಕಳಿಗೂ ದಸರಾ ರಜೆ ವಿಸ್ತರಣೆ ಆಗಿಲ್ಲ..!!

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ದಸರಾ ರಜೆಯನ್ನು ಹತ್ತು ದಿನಗಳ ಕಾಲ ವಿಸ್ತರಿಸಿ ಘೋಷಿಸಿದ್ದಾರೆ. ಇದರಂತೆ ಶಾಲೆಗಳು ಅಕ್ಟೋಬರ್ 18ರಿಂದ ಆರಂಭವಾಗಲಿದೆ. ಮೂಲತಃ ನಾಳೆಯಿಂದಲೇ (ಅ.8) ತರಗತಿಗಳು ಪುನರಾರಂಭವಾಗಬೇಕಿದ್ದರೂ ಸರ್ಕಾರದ ಈ ನಿರ್ಧಾರದಿಂದ ಇನ್ನೂ…

Join WhatsApp Group
error: Content is protected !!