Month: January 2025

ಸಮಯಕ್ಕೆ ಸರಿಯಾಗಿ ಕಚೇರಿಗೆ ಬನ್ನಿ, ಗುರುತಿನ ಚೀಟಿ ಕಡ್ಡಾಯ: ಅಧಿಕಾರಿಗಳು, ನೌಕರರಿಗೆ ಸರ್ಕಾರ ಸೂಚನೆ

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯದ ಸಮಯದಲ್ಲಿ ಅನುಸರಿಸಬೇಕಿರುವ ಸೂಚನೆಗಳ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸುತ್ತೋಲೆ ಹೊರಡಿಸಿದೆ. ಕೆಲವರು ಕರ್ತವ್ಯದ ಅವಧಿಯಲ್ಲಿ ನಿಯಮ ಪಾಲಿಸದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಅಧಿಕಾರಿಗಳು ಮತ್ತು…

ಇಂದು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‌ನ ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ಚುನಾವಣೆ-ಟೌನ್‌ಬ್ಯಾಂಕ್ ಮೇಲಿನ ಆರೋಪದಲ್ಲಿ ಹುರುಳಿಲ್ಲ:ಕಿಶೋರ್ ಕೊಳತ್ತಾಯ

ಪುತ್ತೂರು: ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರಿಂದ ಸ್ಥಾಪನೆಯಾದ, ೧೧೫ ವರ್ಷಗಳ ಇತಿಹಾಸವಿರುವ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‌ನ ಮುಂದಿನ ೫ ವರ್ಷಗಳ ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ಜ.೨೫ರಂದು ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಕೇವಲ ರಾಜಕೀಯ ಕಾರಣಕ್ಕೆ…

ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ‘ಗುರುವಪ್ಪ ಬಾಳೇಪುಣಿ’ ವಿಧಿವಶ-ಹರೇಕಳ ಹಾಜಬ್ಬರನ್ನು ನಾಡಿಗೆ ಪರಿಚಯಿಸಿದ್ದ ಹಿರಿಯ ಪತ್ರಕರ್ತ

ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ವರದಿಗಾರ,ಕಿತ್ತಳೆ ಮಾರಿ ಶಾಲೆ ಕಟ್ಟಿದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ನಾಡಿಗೆ ಪರಿಚಯಿಸಿದ ಗುರುವಪ್ಪ ಬಾಳೆಪುಣಿ (62) ಅವರು ಅಲ್ಪಕಾಲದ ಅಸೌಖ್ಯದಿಂದ ಜ.24 ರಂದು ನಿಧನರಾದರು. 26 ವರ್ಷ ಹೊಸದಿಗಂತ ಪತ್ರಿಕೆಯ…

ಹತ್ಯೆಗೂ 3 ದಿನದ ಹಿಂದೆ 2,500 ರೂ. ಪಾವತಿ! ರೀಲ್ ಸ್ನೇಹಕ್ಕೆ ಬಿದ್ದವಳು ಹೆಣವಾಗಿ ಹೋದಳು

ರೀಲ್ಸ್ ವಿಡಿಯೋ ಶೇರಿಂಗ್ನಲ್ಲಿ ಶುರುವಾದ ಸ್ನೇಹ-ಸಂಬಂಧ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಿರುವನಂತಪುರದ ಕದೀನಂಕುಲಂನಲ್ಲಿ ಸಂಭವಿಸಿದೆ. ಪ್ರಿಯಕರನ ಮಾನಸಿಕ ಹಿಂಸೆಯಿಂದ ದೂರವಾಗಲು ಬಯಸಿದ ಅತಿರಾ (33) ಎಂಬ ಮಹಿಳೆ ಬರ್ಬರವಾಗಿ ಹತ್ಯೆಯಾದ ಘಟನೆ ಸದ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಇನ್‌ಸ್ಟಾಗ್ರಾಮ್‌ ರೀಲ್‌ ಸ್ನೇಹದ ಹೆಸರಿನಲ್ಲಿ…

ನೋಡಬನ್ನಿ ಅತ್ಯಾಕರ್ಷಕ ತಾಲೀಮ್, ಮೆಹಫಿಲೇ ನಾತ್ –
ಶನಿವಾರ ಸಂಜೆಯ ಮೆರುಗ ಹೆಚ್ಚಿಸಲಿದೆ ಸಂದಲ್ ಮೆರವಣಿಗೆ

ಪುತ್ತೂರು :ಮುಕ್ವೆ ಜಮಾಅತ್ ಅನುಮತಿ ಮೇರೆಗೆ ಅನ್ ನೂರ್ ಹನಫಿ ಕಮಿಟಿ ಹಾಗೂ ಯಂಗ್’ಮೆನ್ ಕಮಿಟಿ ಮುಕ್ವೆ ಆಶ್ರಯದಲ್ಲಿ ನಡೆಯುತ್ತಿರುವ ಮುಕ್ವೆ ಉರೂಸ್ ಹಿನ್ನೆಲೆಯಲ್ಲಿ ಜನವರಿ 25ರಂದು ಅತ್ಯಾಕರ್ಷಕ ಸಂದಲ್ ಮೆರವಣಿಗೆ ಜರುಗಲಿದೆ. ಬೆದ್ರಾಳದಿಂದ ಸಂಜೆ 7.30ರ ಸುಮಾರಿಗೆ ಹೊರಡುವ ಸಂದಲ್…

“ಜನಸ್ನೇಹಿ” ಅಧಿಕಾರಿ ಜುಬಿನ್ ಮೊಹಾಪಾತ್ರ ದಿಢೀರ್ ವರ್ಗಾವಣೆ..!

ಪುತ್ತೂರು; ಅತ್ಯಂತ ಕ್ರೀಯಾಶೀಲ ಅಧಿಕಾರಿಯಾಗಿದ್ದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಅವರಿಗೆ ಇದೀಗ ದಿಢೀರ್ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ. ಜನಸ್ನೇಹಿ ಅಧಿಕಾರಿಯಾಗಿದ್ದ ಜುಬಿನ್ ಮೊಹಾಪಾತ್ರ ಅವರು ಪುತ್ತೂರು ಉಪವಿಭಾಗದ ಸುಳ್ಯ ಬೆಳ್ತಂಗಡಿ ಕಡಬ ವ್ಯಾಪ್ತಿಯಲ್ಲಿ ತಾವು ಬಂದ ಕೆಲವೇ…

ಮಹಾಕುಂಭಮೇಳದಲ್ಲಿ Dubai Sheikh ವೇಷ ಧರಿಸಿ ರೀಲ್ಸ್ ಮಾಡಿದ ವ್ಯಕ್ತಿ; ಮುಂದೇನಾಯ್ತು ನೀವೇ ನೋಡಿ

ಜನವರಿ 13ರಿಂದ ಅರಂಭವಾಗಿರುವ ಮಹಾಕುಂಭಮೇಳಕ್ಕೆ (Maha Kumbh Mela) ದೇಶ, ವಿದೇಶಗಳಿಂದ ಪ್ರತಿನಿತ್ಯ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಿದ್ದು, ಹೊಸ ದಾಖಲೆಯನ್ನೇ ಬರೆದಿದೆ. ಪ್ರಮುಖವಾಗಿ ನಾಗಾಸಾಧುಗಳು ಹಾಗೂ ವಿದೇಶಿಗರು ಹೆಚ್ಚು ಗಮನವನ್ನು ಸೆಳೆಯುತ್ತಿದ್ದು, ಇದೀಗ ವ್ಯಕ್ತಿಯೊಬ್ಬರು ದುಬೈ ಶೇಖ್ನಂತೆ (Dubai Sheikh)…

ಕಬಕ ಮಸೀದಿ ಬಳಿ ಗುಡ್ಡಕ್ಕೆ ಬೆಂಕಿ!

ಪುತ್ತೂರು: ಇಲ್ಲಿನ ಕಬಕ ಮಸೀದಿ ಎದುರುಗಡೆಯ ಗುಡ್ಡಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ರೈಲ್ವೇ ಹಳಿಯ ಆಸುಪಾಸು ನಿರ್ಜನ ಗುಡ್ಡಕ್ಕೆ ಬೆಂಕಿ ತಗುಲಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.

ಪತ್ನಿಯ ಮನವೊಲಿಸಲು ವಿಫಲನಾದ ಪತಿ- ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ!

ಪತ್ನಿ ಮನೆಗೆ ಬರಲಿಲ್ಲ ಎಂದು ಪತ್ನಿ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟೆಕ್ಕಿ ಅತುಲ್ ಸುಭಾಷ್ ಪ್ರಕರಣ ಮಾಸುವ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ.ಮಂಜುನಾಥ್ (39) ಮೃತ ದುರ್ದೈವಿ. ಮಂಜುನಾಥ್ ಮೂಲತಃ ಕುಣಿಗಲ್ನವರಾಗಿದ್ದು, ಸ್ವಂತ…

ಮೊಬೈಲ್ ಕ್ಯಾಂಟೀನ್ ಸಹಾಯಧನ ಸೌಲಭ್ಯಕ್ಕೆ ಅರ್ಜಿ

ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಒಂದು ತಿಂಗಳ ಕೌಶಲ್ಯಾಭಿವೃದ್ದಿ ತರಬೇತಿ ನೀಡಿ, ತರಬೇತಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ…

Join WhatsApp Group
error: Content is protected !!