

ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ನ ಐವರು ಹಿರಿಯ ನಾಯಕರು ಒಂದೇ ದಿನದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯನ್ನು ಜೆಡಿಯು ಬೆಂಬಲಿಸಿದ ಕಾರಣಕ್ಕೆ ಪಕ್ಷದಲ್ಲಿ ಕೆಲ ನಾಯಕರು ಅಸಮಾಧಾನ ಸ್ಫೋಟಗೊಂಡಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ.
ಜೆಡಿಯು ಪಕ್ಷದ ಯುವ ಘಟಕದ ಉಪಾಧ್ಯಕ್ಷ ತಬ್ರೇಜ್ ಹಸನ್ ರಾಜೀನಾಮೆ ನೀಡಿದ್ದಾರೆ.ಈ ಮೊದಲು, ಜೆಡಿಯು ಅಲ್ಪಸಂಖ್ಯಾತರ ಸೆಲ್ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಶಹನವಾಜ್ ಮಲಿಕ್, ಅಲಿಘರ್‌ನಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತಬ್ರೇಜ್ ಸಿದ್ದಿಕಿ, ಭೋಜ್‌ಪುರ ಮೂಲದ ಸದಸ್ಯ ಮೊಹಮ್ಮದ್ ದಿಲ್ಶನ್ ರೈನ್ ಮತ್ತು ಮಾಜಿ ಅಭ್ಯರ್ಥಿ ಮೊಹಮ್ಮದ್ ಖಾಸಿಂ ಅನ್ಸಾರಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ವಕ್ಫ್ ತಿದ್ದುಪಡಿ ಮಸೂದೆಗೆ ಜೆಡಿಯು ಪಕ್ಷ ಬೆಂಬಲ ನೀಡಿರುವುದು ಜಾತ್ಯತೀತ ಮೌಲ್ಯಗಳ ಪರವಾಗಿ ವಿರುದ್ಧವಾಗಿದೆ.ಆ ಮೂಲಕ ಮುಸ್ಲಿಮರ ನಂಬಿಕೆಯನ್ನು ಪಕ್ಷ ಮುರಿದಿದೆ ಎಂದು ಈ ನಾಯಕರು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
