ಹಿಂದೂ ಹಿಂದೂ ಎಂದು ಯುವಕರು ಹಿಂದುತ್ವದ ಹಿಂದೆ ಹೋಗುತ್ತಾರೆ. ನಾಳೆ ಇಂತಹ ಅನಾಹುತ ಆದಾಗ ಯಾರೂ ಇರುವುದಿಲ್ಲ. ಕೆಲವು ಹಿಂದುತ್ವ ಸಂಘಟನೆಗಳ ಮುಖಂಡರು ನಾವಿದ್ದೇವೆ ಎಂದು ಈಗ ನಾಲ್ಕೈದು ದಿನ ಬಂದು ಹೋಗುತ್ತಾರೆ. ಅದು ಮಾಡುತ್ತೇವೆ ಇದು ಮಾಡುತ್ತೇವೆ ಎನ್ನುತ್ತಾರೆ.

ಎಲ್ಲ ಆದ ಮೇಲೆ ಅವರೂ ಇರುವುದಿಲ್ಲ. ಯಾರೂ ಇರುವುದಿಲ್ಲ’ಎಂದು ಸುಹಾಸ್ ಶೆಟ್ಟಿ ಅವರ ತಂದೆ ಮೋಹನ ಶೆಟ್ಟಿ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡರು.

‘ನಮ್ಮ ಮಗನಿಗೆ 31 ವರ್ಷ. ನಮ್ಮ ಕುಟುಂಬಕ್ಕೆ ಅವನೇ ಆಧಾರ ಸ್ತಂಭವಾಗಿದ್ದ. ಜೀವನ ಪೂರ್ತಿ ಕೊರಗುವವರು ನಾವು’ ಎಂದು ಹೇಳಿದರು.

‘ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ನಿಜ. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದೆ. ಹಾಗಾಗಿ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಹಿಂದೂಗಳಿಗೆ ಭದ್ರತೆ ಇಲ್ಲ’ ಎಂದೂ ಅವರು ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!