
ಸೂರತ್ ನಗರದಲ್ಲಿ 23 ವರ್ಷದ ಶಿಕ್ಷಕಿಯೊಬ್ಬರು ತನ್ನ 11 ವರ್ಷದ ವಿದ್ಯಾರ್ಥಿಯನ್ನು ಅಪಹರಿಸಿರುವ ಘಟನೆ ನಡೆದಿದೆ. 4 ದಿನಗಳ ಹುಡುಕಾಟದ ನಂತರ 390 ಕಿಲೋಮೀಟರ್ ದೂರದಲ್ಲಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಶಿಕ್ಷಕಿಯನ್ನು ಪತ್ತೆ ಮಾಡಿ ಆಕೆಯನ್ನು ಬಂಧಿಸಿದ್ದಾರೆ.
ಎಪ್ರಿಲ್ 25 ರ ಮಧ್ಯಾಹ್ನ,ಬಾಲಕನೊಂದಿಗೆ ಅತ್ಯಂತ ಸಲುಗೆಯಿಂದಿದ್ದ ಶಿಕ್ಷಕಿ, ಹಾಡ ಹಗಲೇ ನಾಪತ್ತೆಯಾಗಿದ್ದಳು. ಆ ಬಳಿಕ ಇಬ್ಬರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ಸಿಸಿಟಿವಿ ದೃಶ್ಯಾವಳಿಯಲ್ಲಿ, ಶಿಕ್ಷಕಿಯು ಬಾಲಕನೊಂದಿಗೆ ಬ್ಯಾಗುಗಳನ್ನು ಹೊತ್ತುಕೊಂಡು ಹೋಗುತ್ತಿರುವುದು ಸೆರೆಯಾಗಿದ್ದು, ಇದು ಪೂರ್ವಯೋಜಿತ ಎಂದು ಕಂಡುಕೊಳ್ಳಲಾಗಿದೆ. ಮೂರು ವರ್ಷಗಳಿಂದ ಹುಡುಗನಿಗೆ ಪಾಠ ಮಾಡುತ್ತಿದ್ದಳು, ಮತ್ತು ಕಳೆದೊಂದು ವರ್ಷದಿಂದ, ಅವನು ಅವಳ ಏಕೈಕ ಖಾಸಗಿ ವಿದ್ಯಾರ್ಥಿಯಾಗಿದ್ದ, ಈ ಆತ್ಮೀಯತೆಯು ಕಾಲಾನಂತರದಲ್ಲಿ ಕೀಳು ಮಟ್ಟಕ್ಕೆ ಇಳಿದಿದೆ ಎನ್ನಲಾಗಿದೆ.
ಪೊಲೀಸ್ ತನಿಖೆಯಲ್ಲಿ, ಶಿಕ್ಷಕಿಯ ಮನೆಯಲ್ಲಿ ಮತ್ತು ನಂತರ ವಡೋದರಾದ ಹೋಟೆಲ್‌ನಲ್ಲಿ ಲೈಂ*ಗಿಕ ಸಂಪರ್ಕ ನಡೆದಿದೆ ಎಂದು ತಿಳಿದುಬಂದಿದೆ. ಸೂರತ್‌ಗೆ ಪಲಾಯನ ಮಾಡುವ ಮೊದಲು, 13 ವರ್ಷದ ಬಾಲಕ ತನ್ನ ಕೆಲವು ಬಟ್ಟೆಗಳನ್ನು ಶಿಕ್ಷಕಿಗೆ ನೀಡಿದ್ದಾನೆ ಎಂದು ವರದಿಯಾಗಿದೆ, ತಪ್ಪಿಸಿಕೊಳ್ಳಲು ಹೆಚ್ಚುವರಿ ವಸ್ತುಗಳನ್ನೂ ಖರೀದಿಸಿದ್ದರು ಎಂದು ತಿಳಿದು ಬಂದಿದೆ.
ಬಾಲಕನ ಪೋಷಕರು ದೂರು ದಾಖಲಿಸಿದ ನಾಲ್ಕು ದಿನಗಳ ಹುಡುಕಾಟದ ನಂತರ ಗುಜರಾತ್-ರಾಜಸ್ಥಾನ ಗಡಿಯ ಬಳಿ ಇಬ್ಬರು ಪತ್ತೆಯಾಗಿದ್ದು, ಶಿಕ್ಷಕಿಯನ್ನು ಬಂಧಿಸಲಾಗಿದೆ. ವಡೋದರಾ, ಅಹಮದಾಬಾದ್, ದೆಹಲಿ, ಜೈಪುರ ಮತ್ತು ವೃಂದಾವನ ಸೇರಿದಂತೆ ಹಲವಾರು ನಗರಗಳಲ್ಲಿ ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಮಾನ್ಸಿ ಎಂಬ ಶಿಕ್ಷಕಿ ಗರ್ಭಧರಿಸಿರುವುದು ಬಹಿರಂಗವಾದ ನಂತರ, ಅಪ್ರಾಪ್ತ ವಯಸ್ಕನೇ ತಂದೆ ಎಂದು ಆಕೆ ಹೇಳಿಕೊಂಡ ನಂತರ ಹಗರಣ ಇನ್ನಷ್ಟು ಸುದ್ದಿಯಾಗಿದೆ. ಅಧಿಕಾರಿಗಳು ತತ್ ಕ್ಷಣ ಡಿಎನ್‌ಎ ಪರೀಕ್ಷೆಗೆ ಆದೇಶಿಸಿದ್ದಾರೆ.
ಸೂರತ್ ಪೊಲೀಸ್ ಉಪ ಆಯುಕ್ತ ಭಾಗೀರಥ್ ಗಧ್ವಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು “ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆ ಐದು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಅಪ್ರಾಪ್ತ ವಯಸ್ಕ ಬಾಲಕನೇ ಮಗುವಿನ ತಂದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಹೇಳಿಕೆಯ ಆಧಾರದ ಮೇಲೆ, ನಾವು ಡಿಎನ್‌ಎ ಪರೀಕ್ಷೆಗೆ ಆದೇಶಿಸಿದ್ದೇವೆ. ವಿಚಾರಣೆಯ ಸಮಯದಲ್ಲಿ, ಇಬ್ಬರೂ ಹಲವಾರು ತಿಂಗಳುಗಳಿಂದ ದೈಹಿಕ ಸಂಬಂಧದಲ್ಲಿ ತೊಡಗಿದ್ದಾಗಿ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಆರೋಪದ ಮೇಲೆ ಶಿಕ್ಷಕಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಔಪಚಾರಿಕ ಪ್ರಕರಣ ದಾಖಲಾಗಿದ್ದು, ಜತೆಗೆ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಲೈಂ*ಗಿಕ ಶೋಷಣೆಗಾಗಿ ಗಂಭೀರ ಆರೋಪಗಳನ್ನು ದಾಖಲಿಸಲಾಗಿದೆ.
ಹಿರಿಯ ಅಧಿಕಾರಿಗಳು ಈ ಘಟನೆ ‘ನಂಬಿಕೆ ಮತ್ತು ಅಧಿಕಾರದ ಗಂಭೀರ ಉಲ್ಲಂಘನೆ’ ಎಂದು ಕರೆದಿದ್ದಾರೆ, ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ಕ್ಷೇತ್ರಗಳಲ್ಲಿ ರಕ್ಷಣೆಯ ತುರ್ತು ಅಗತ್ಯಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಲಯದ ಆದೇಶದ ಡಿಎನ್‌ಎ ಪರೀಕ್ಷೆಯ ಫಲಿತಾಂಶಕ್ಕೆ ಕಾಯಲಾಗುತ್ತಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣದ ತೀವ್ರ ತನಿಖೆ ನಡೆಯುತ್ತಿದೆ






