
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಸಂದರ್ಭ ಬಂದ್ ಗೆ ಕರೆ ನೀಡಿದ್ದ ಹಿನ್ನಲೆ ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ವೆಲ್ ರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದರು.
ಬಂಧನದ ಬಳಿಕ ಶರಣ್ ಪಂಪ್‌ವೆಲ್ ಅವರನ್ನು ಮಂಗಳೂರಿನ ಬೋಂದೆಲ್‌ನಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಪೊಲೀಸರು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಶರಣ್ ಪಂಪ್‌ವೆಲ್‌ಗೆ ಜಾಮೀನು ನೀಡಿ ಆದೇಶಿಸಿದರು.






