ಈ ಪುಟ್ಟ ಮಗುವಿಗೆ
ಹಿಂದು ಗೊತ್ತಿಲ್ಲ, ಮುಸ್ಲಿಂ ಗೊತ್ತಿಲ್ಲ.ರಾಮ ಗೊತ್ತಿಲ್ಲ, ರಹೀಮ್ ಗೊತ್ತಿಲ್ಲ. ಮಂದಿರ ಗೊತ್ತಿಲ್ಲ, ಮಸೀದಿ ಗೊತ್ತಿಲ್ಲ.
ಚಾಕು ತಾಗಿದರೆ ಗಾಯ, ನೋವು, ಆಗ್ತದೆ ಎಂದು ಕೂಡ ಗೊತ್ತಿಲ್ಲ.
ಖಂಡನೆ ಗೊತ್ತಿಲ್ಲ, ಕಠಿಣ ಕ್ರಮ ಗೊತ್ತಿಲ್ಲ, ಸೆಕ್ಷನ್ ಗೊತ್ತಿಲ್ಲ..
ಗೊತ್ತಿರುವುದು ಅಪ್ಪ,ಅಮ್ಮ, ಪ್ರೀತಿ,ಕೊಂಡಾಟ, ಚಾಕ್ಲೆಟ್ ಅಷ್ಟೇ.
ಅಪ್ಪ ನಿನಗಾಗಿ  ಸ್ವರ್ಗದಲ್ಲಿ ಕಾಯುತ್ತಿರುವರು. ಅಮ್ಮನಿಗೆ ಸಮಾಧಾನ ಮಾಡು.
….
ನನ್ನನ್ನು ಕ್ಷಮಿಸು ಕಂದ.

ಇದನ್ನು ಸರಿ ಮಾಡುವ ಪರಿಸ್ಥಿತಿಯಲ್ಲಿ ನಾನು, ನಾವಿಲ್ಲ.ತಿರುಗಿ ಬರಲಾಗದಷ್ಟು ದೂರ ಬಂದು ಆಗಿದೆ.
ಸಜ್ಜನರ ಮೌನವೇ ಅಮಾಯಕನ ಮರಣಕ್ಕೆ ಮೂಲ ಕಾರಣ. ರಕ್ತಕ್ಕೆ ರಕ್ತ ಬೇಕು, ಒಂದಕ್ಕೆ ಎರಡು ಬೇಕು, ಕೊಲ್ಲು, ಕಡಿ, ಹೊಡಿ ಎನ್ನುವಾಗ ಚಪ್ಪಾಳೆ ತಟ್ಟುವ ಜನರಿರುವಾಗ, ಇದನ್ನು ಕೇಳಿಯೂ ಕೇಳದಂತೆ ನಟಿಸುವ ಆಡಳಿತಗಾರರು ಇರುವಾಗ ಇಂದು ನಿನ್ನ ಅಪ್ಪ, ನಾಳೆ ನಾನು ಆಗಿರಲೂ ಬಹುದು. ಸರಕಾರ, ನೀಚ ಜನರಿಂದ ದೊಡ್ಡ ಪ್ರತೀಕ್ಷೆ, ನಿರೀಕ್ಷೆ ಇಲ್ಲ.
ಕ್ಷಮಿಸು ಪುಟ್ಟಾ ಎಂದು ಹೇಳಲು ಮಾತ್ರ ಸದ್ಯ ನನ್ನಿಂದ ಸಾಧ್ಯ.

🙏😪🙏
ಜಮುಕ್ರಿ

Leave a Reply

Your email address will not be published. Required fields are marked *

Join WhatsApp Group
error: Content is protected !!