ದುಷ್ಕರ್ಮಿಗಳಿಂದ ಮಂಗಳವಾರ ಕೊಲೆಯಾದ ಅಬ್ದುಲ್ ರಹ್ಮಾನ್ ಮೋನು ಅವರ ಮೃತದೇಹವನ್ನು ಕೊಳ್ತಮಜಲಿಗೆ ಬುಧವಾರ ಬೆಳಗ್ಗೆ ತೆಗೆದುಕೊಂಡು ಹೋಗಲಾಯಿತು. ಕುತ್ತಾರ್ ಮದನಿ ನಗರ ಮಸೀದಿಯಲ್ಲಿ ಅಬ್ದುಲ್ ರಹ್ಮಾನ್ ಮೋನು ಅವರ ಮಯ್ಯತ್ ಸ್ನಾನ ಮಾಡಿಸಲಾಯಿತು. ಅಲ್ಲಿ ಮಯ್ಯತ್ ನಮಾಝ್ ಬಳಿಕ ಪೊಲೀಸ್ ಬಂದೋಬಸ್ತ್‌ನಲ್ಲಿ ಮೃತದೇಹವನ್ನು ಕೊಂಡೊಯ್ಯಲಾಯಿತು.

ಕುತ್ತಾರ್ , ತೊಕ್ಕೊಟ್ಟು, ಪಂಪ್ ವೆಲ್‌, ಮಿತ್ತಬೈಲ್‌ ‌ಮಾರ್ಗವಾಗಿ ಕೊಳ್ತಮಜಲಿನ‌ ಮನೆಗೆ ಕೊಂಡೊಯ್ದು ನಂತರ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್‌ ಆವರಣದಲ್ಲಿ ದಫನ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಈ ಸಂದರ್ಭ ಮದನಿ ನಗರದಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಸಹಿತ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್‌ನ ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!