ಡಂಬಲ್ಸ್‌ ನಿಂದ ಹೆಂಡತಿಯ ತಲೆಗೆ ಹೊಡೆದು ಬಳಿಕ ಪತಿಯೂ ನೇಣಿಗೆ ಶರಣಾಗಿರುವ ಘಟನೆ ದೇವನಹಳ್ಳಿಯ ವಿಜಯಪುರದಲ್ಲಿ ನಡೆದಿದೆ. ಶಾಮಣ್ಣ (40) ಮತ್ತು ಸುಮಾ (35) ಮೃತರು ಇಬ್ಬರ ನಡುವೆ ಕೌಟುಂಬಿಕ ಕಾರಣಗಳಿಂದಾಗಿ ಹಲವು ದಿನಗಳಿಂದ ಜಗಳ ನಡೆಯುತ್ತಿತ್ತು.

ಇದೇ ಕಾರಣದಿಂದ ಹತ್ಯೆ ನಡೆದಿರಬಹುದೆಂದು ಊಹಿಸಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಗ್ರಾಮಾಂತರ ಜಿಲ್ಲೆ ಎಸ್‌ಪಿ ಸಿ.ಕೆ. ಬಾಬಾ ಹಾಗೂ ವಿಜಯನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣದ ಕುರಿತು ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!