ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆರಿಸಿಕೊಂಡ ಪಂಜಾಬ್‌ ಕಿಂಗ್ಸ್ ಮುಂಬೈ ಇಂಡಿಯನ್ಸ್‌ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 203 ರನ್‌ ಕಲೆಹಾಕಿ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ 204 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಪಂಜಾಬ್‌ ಕಿಂಗ್ಸ್‌ 19 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 207 ರನ್‌ ಕಲೆಹಾಕಿತು.

ಮುಂಬೈ ಇಂಡಿಯನ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ನಿರೀಕ್ಷಿತ ಆರಂಭ ಮಾಡಲಿಲ್ಲ. 8 ರನ್‌ಗೆ ಶರ್ಮಾ ಔಟ್‌ ಆದರೆ, ಮತ್ತೋರ್ವ ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋ 38 (24) ರನ್‌ ಗಳಿಸಿದರು. ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ರನ್‌ ಕಲೆಹಾಕಿದ ತಿಲಕ್‌ ವರ್ಮಾ 44 (29) ರನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ 44 (26) ರನ್‌ ಬಾರಿಸಿದರು. ನಾಯಕ ಹಾರ್ದಿಕ್‌ ಪಾಂಡ್ಯ 15 (13) ರನ್‌, ನಮನ್‌ ಧೀರ್‌ 37 (18), ರಾಜ್‌ ಬಾವಾ ಅಜೇಯ 8 (4) ರನ್‌ ಹಾಗೂ ಮಿಚೆಲ್‌ ಸ್ಯಾಂಟ್ನರ್‌ ಯಾವುದೇ ರನ್‌ ಗಳಿಸದೇ ಅಜೇಯರಾಗಿ ಉಳಿದರು.

ಪಂಜಾಬ್‌ ಕಿಂಗ್ಸ್‌ ಪರ ಅಜ್ಮತುಲ್ಲಾ ಒಮರ್ಝೈ 2 ವಿಕೆಟ್‌, ಜೆಮಿಸನ್‌, ಸ್ಟೊಯ್ನಿಸ್‌, ವಿಜಯ್‌ಕುಮಾರ್‌ ವೈಶಾಖ್‌ ಹಾಗೂ ಯುಜ್ವೇಂದ್ರ ಚಹಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಪಂಜಾಬ್‌ ಕಿಂಗ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪ್ರಿಯನ್ಶ್‌ ಆರ್ಯ 20 (10) ರನ್‌ ಹಾಗೂ ಪ್ರಭ್‌ಸಿಮ್ರನ್‌ ಸಿಂಗ್‌ 6 (9) ರನ್‌ ಗಳಿಸಿ ಕಳಪೆ ಆರಂಭ ಮಾಡಿದರು. ಜೋಸ್‌ ಇಂಗ್ಲಿಸ್‌ 38 (21), ನೇಹಲ್‌ ವಧೇರಾ 48 (29) ರನ್‌ ಗಳಿಸಿದರು. ಇವರಿಬ್ಬರ ಜೊತೆ ಅಬ್ಬರದ ಜತೆಯಾಟವನ್ನಾಡಿದ ಶ್ರೇಯಸ್‌ ಐಯ್ಯರ್‌ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್‌ ಸಹಿತ ಅಜೇಯ 87 ರನ್‌ ಬಾರಿಸಿದರು. ಶಶಾಂಕ್‌ ಸಿಂಗ್‌ 2 (3) ರನ್‌ ಗಳಿಸಿದರೆ, ಮಾರ್ಕಸ್‌ ಸ್ಟಾಯಿನಿಸ್‌ ಅಜೇಯ 2 (2) ರನ್‌ ಕಲೆಹಾಕಿದರು.

ಮುಂಬೈ ಇಂಡಿಯನ್ಸ್‌ ಪರ ಅಶ್ವನಿ ಕುಮಾರ್‌ ಎರಡು ವಿಕೆಟ್‌, ಟ್ರೆಂಟ್‌ ಬೌಲ್ಟ್‌ ಹಾಗೂ ನಾಯಕ ಹಾರ್ದಿಕ್‌ ಪಾಂಡ್ಯ ತಲಾ ಒಂದೊಂದು ವಿಕೆಟ್‌ ಪಡೆದರು.

Leave a Reply

Your email address will not be published. Required fields are marked *

Join WhatsApp Group
error: Content is protected !!