
ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್‌ನಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಮತ್ತು ಆಕೆಯ ಗೆಳೆಯನನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು, ಬೋರ್‌ವೆಲ್‌ಗೆ ಕಟ್ಟಿ ಹಾಕಿ ಥಳಿಸಿದ್ದಾರೆ. ಅಶೋಕ್ ನಗರ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video).
ಸ್ವಾಮಿ ಮತ್ತು ಮೌನಿಕಾ ಮಾಡಬಾರದ್ದನ್ನು ಮಾಡಿ ಸಾರ್ವಜನಿಕರ ಕೈಯಲ್ಲಿ ಸಿಕ್ಕಿಬಿದ್ದು ಹೀಗೆ ಧರ್ಮದೇಟು ತಿಂದ ಜೋಡಿ (Crime News). ಫೇಸ್‌ಬುಕ್ ಮೂಲಕ ಇವರಿಬ್ಬರು ಪರಿಚಿತರಾಗಿದ್ದರು ಎನ್ನಲಾಗಿದೆ.
ಅಶೋಕ್ ನಗರದ ಮೌನಿಕಾ ಭುಪಾಲಪಲ್ಲಿ ಜಿಲ್ಲೆಯ ಸ್ವಾಮಿಯೊಂದಿಗೆ ಹಲವು ಸಮಯದಿಂದ ಅನೈತಿಕ ಸಂಬಂಧ ಹೊಂದಿದ್ದಳು. ಸ್ಥಳೀಯರ ಪ್ರಕಾರ ದೂರ ದೂರ ಊರಿನ ಇವರು ಫೇಸ್‌ಬುಕ್ ಮೂಲಕ ಪರಿಚಿತರಾಗಿದ್ದರು. ಈ ಪರಿಚಯ ಕ್ರಮೇಣ ಅನೈತಿಕ ಸಂಬಂದಕ್ಕೆ ಎಡೆ ಮಾಡಿಕೊಟ್ಟಿತ್ತು.
ಕಳೆದ 3 ದಿನಗಳಿಂ ಸ್ವಾಮಿಯು ಮೌನಿಕಾ ಮನೆಯಲ್ಲಿ ತಂಗಿದ್ದ. ಇದು ಸ್ಥಳೀಯರ ಗಮನಕ್ಕೆ ಬಂದು ಅವರ ಆಕ್ರೋಶದ ಕಟ್ಟೆ ಒಡೆದಿತ್ತು. ಹೀಗಾಗಿ ಇವರಿಬ್ಬರನ್ನು ಹೊರಗೆಳೆದ ಸ್ಥಳೀಯರು ಕಾನೂನನ್ನು ಕೈಗೆತ್ತಿಕೊಂಡು ಬೋರ್‌ವೆಲ್‌ಗೆ ಕಟ್ಟಿ ಹಾಕಿ ಥಳಿಸಿದರು. ಆ ಮೂಲಕ ಅನೈತಿಕ ಚಟುವಟಿಕೆಗೆ ತಕ್ಕ ʼಪಾಠʼ ಕಲಿಸಿದ್ದಾರೆ. ನೈತಿಕತೆಯನ್ನು ಉಲ್ಲಂಘಿಸಿದ ಸ್ವಾಮಿಯನ್ನು ಆ ಮೂಲಕ ʼಶುದ್ಧೀಕರಿಸಿದ್ದಾಗಿʼ ಸ್ಥಳೀಯರು ತಿಳಿಸಿದರು.
ಸದ್ಯ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು ನೆಟ್ಟಿಗರ ಗಮನ ಸೆಳೆದಿದೆ. ದಾರಿ ತಪ್ಪಿದ ಯುವ ಜನತೆಗೆ ಪಾಠ ಕಲಿಸಲು ಸ್ಥಳೀಯರು ಉತ್ತಮ ಕೆಲಸವನ್ನೇ ಮಾಡಿದ್ದಾರೆ ಎಂದು ಕೆಲವರು ಈ ಕೃತ್ಯವನ್ನು ಸಮರ್ಥಿಸಿಕೊಂಡರೆ, ಇನ್ನು ಹಲವರು ಇಂತಹ ಘಟನೆ ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎಂದು ಕಿಡಿ ಕಾರಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ.
ಸಾರ್ವಜನಿಕವಾಗಿ ಈ ಜೋಡಿಗೆ ಥಳಿಸಿದ ಬಳಿಕ ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ಬಂಧನವನ್ನು ದೃಢಪಡಿಸಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.






