ಮಗಳ ಮದುವೆಗೆ ಒಂದು ದಿನ ಇರುವಾಗ ಮಹಿಳೆಯೊಬ್ಬರು ಮೃ*ತಪಟ್ಟಿರುವ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತನಲೂರುನಲ್ಲಿ ನಡೆದಿರುವುದು ವರದಿಯಾಗಿದೆ.

ಮೃತ ಮಹಿಳೆಯನ್ನು ತನಲೂರು ಗ್ರಾಮದ ಝೈನಬಾ (44) ಎಂದು ಗುರುತಿಸಲಾಗಿದೆ.ಬುಧವಾರದಂದು ಝೈನಬಾರ ನಿವಾಸದಲ್ಲಿ ಅವರ ಪುತ್ರಿಯ ವಿವಾಹ ಪೂರ್ವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಉಳಿದಿದ್ದ ಕೇಕ್ ಅನ್ನು ಮನೆಯಲ್ಲಿ ಇಡಲಾಗಿತ್ತು. ಗುರುವಾರ ಬೆಳಗ್ಗೆ ಚಹಾ ಸೇವಿಸುವಾಗ, ಝೈನಬಾ ಉಳಿದಿದ್ದ ಕೇಕ್ ಅನ್ನು ಅದರೊಂದಿಗೆ ಸೇವಿಸಿದ್ದಾರೆ.

ಅದನ್ನು ಸೇವಿಸುತ್ತಿದ್ದಂತೆಯೇ ಗಂಟಲಲ್ಲಿ ಸಿಲುಕಿಕೊಂಡು, ಜೈನಬಾರಿಗೆ ಉಸಿರಾಟದ ತೊಂದರೆಯುಂಟಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸತತ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಶುಕ್ರವಾರದಂದು ಝೈನಬಾ ನಿಧನರಾಗಿದ್ದಾರೆ.

ಝೈನಬಾರ ನಿಧನದಿಂದಾಗಿ ಶನಿವಾರ (ಮೇ 31) ವಿವಾಹ ಕಾರ್ಯಕ್ರಮದ ಭಾಗವಾಗಿ ನಡೆಯಬೇಕಿದ್ದ ಅವರ ಪುತ್ರಿಯ ನಿಖಾ ಶಾಸ್ತ್ರವನ್ನು ಕೆಲವೇ ಜನರ ಸಮ್ಮುಖದಲ್ಲಿ ನೆರವೇರಿಸಲಾಗಿದ್ದು, ಬಾಕಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!