ಗೋರಖ್ಪುರ, ಜೂನ್ 02: ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೋರಖ್ಪುರ-ವಾರಾಣಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಎಸ್ಯುವಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನದಲ್ಲಿದ್ದ ಸವಾರರು ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದಿದ್ದಾರೆ. ಇಬ್ಬರನ್ನು ಬಾನೆಟ್ ಮೇಲೆ ಸುಮಾರು 100 ಮೀಟರ್‌ಗಳಷ್ಟು ಎಳೆದೊಯ್ಯಲಾಗಿತ್ತು.
ಅಪಾಚೆಯಲ್ಲಿ ಕುಳಿತಿದ್ದ ನಾಲ್ವರು ಸ್ನೇಹಿತರು ಟ್ರ್ಯಾಕ್ಟರ್ ಅನ್ನು ಹಿಂದಿಕ್ಕಲು ಹೋಗಿ ಜೀವವನ್ನೇ ಕಳೆದುಕೊಂಡಿದ್ದಾರೆ.

ಎದುರಿನಿಂದ ಬರುತ್ತಿದ್ದ ಎಸ್ಯುವಿ ಬೈಕ್ಗೆ ಡಿಕ್ಕಿ ಹೊಡೆದಿದೆ. ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಮೃತ ನಾಲ್ವರಲ್ಲಿ ರಾಹುಲ್ ಎಂಬುವವನ ನಿಶ್ಚಿತಾರ್ಥ ಜೂನ್ 1ರಂದು ನಿದಿಯಾಗಿತ್ತು. ಆತನ ಸ್ನೇಹಿತ ಅರವಿಂದ್ ಕೇವಲ ಒಂದು ವಾರದ ಹಿಂದೆ ಬ್ಯಾಂಕಾಕ್‌ನಿಂದ ಹಿಂತಿರುಗಿದ್ದರು. ಉಳಿದಿಬ್ಬರಿಗೂ ಮದುವೆಯಾಗಿ ಮಕ್ಕಳಿದ್ದಾರೆ. ಕಾಣೆಯಾದ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!