ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಕಠಿನ ಕ್ರಮಕ್ಕೆ ಮುಂದಾಗಿದ್ದು ಹಿಂದೂ ಪರ ಸಂಘಟನೆಯ ಪ್ರಮುಖರು ಸೇರಿ 36 ಮಂದಿ ಗಡೀಪಾರಿಗೆ ಕಾನೂನು ಪ್ರಕ್ರಿಯೆ ಆರಂಭಿಸಿದೆ.ಯಾರೆಲ್ಲ ಪಟ್ಟಿಯಲ್ಲಿದ್ದಾರೆ ಇಲ್ಲಿದೆ ವಿವರ

ಗಡೀಪಾರಿಗೆ ಪ್ರಸ್ತಾವನೆ ಸಲ್ಲಿಸಿದವರ ಹೆಸರು ಮತ್ತು ಠಾಣಾ ವ್ಯಾಪ್ತಿ

ಬಂಟ್ವಾಳ ನಗರ ಠಾಣೆ: ಹಸೈನಾರ್(46), ಮಹಮ್ಮದ್ ಸಫಾನ್(26), ರಾಜು ಅಲಿಯಾಸ್ ರಾಜೇಶ್(35)

ಬಂಟ್ವಾಳ ಗ್ರಾಮಾಂತರ: ಭರತ್ ರಾಜ್ ಬಿ ಅಲಿಯಾಸ್ ಭರತ್ ಕುಮ್ಡೇಲು(38), ಪವನ್ ಕುಮಾರ್(33), ಚರಣ್ ಅಲಿಯಾಸ್ ಚರಣ್ ರಾಜ್(28), ಅಬ್ದುಲ್ ಲತೀಫ್(40), ‘ಮಹಮ್ಮದ್ ಅಶ್ರಫ್(44), ಮೊಯ್ದಿನ್ ಅಮ್ನಾನ್ ಅಲಿಯಾಸ್ ಅದ್ದು(24)

ವಿಟ್ಲ ಠಾಣೆ: ಗಣೇಶ ಅಲಿಯಾಸ್ ಗಣೇಶ ಪೂಜಾರಿ(35), ಅಬ್ದುಲ್ ಖಾದರ್ ಅಲಿಯಾಸ್ ಸೌಕತ್(34), ಚಂದ್ರಹಾಸ(23)

ಪುಂಜಾಲಕಟ್ಟೆ ಠಾಣೆ: ಭುವಿ ಅಲಿಯಾಸ್ ಭುವಿತ್ ಶೆಟ್ಟಿ(35)

ಬೆಳ್ತಂಗಡಿ ಠಾಣೆ: ಮಹೇಶ್ ಶೆಟ್ಟಿ ತಿಮರೋಡಿ(53), ಅಶ್ರಫ್ ಬಿ ಅಲಿಯಾಸ್ ಗರಗಸ ಅಶ್ರಫ್ (43), ಮನೋಜ್ ಕುಮಾರ್(37)

ಪುತ್ತೂರು ನಗರ: ಅರುಣ್ ಕುಮಾರ್ ಪುತ್ತಿಲ(54), ಹಕೀಮ್ ಕೂರ್ನಡ್ಕ (38), ಅಜಿತ್ ರೈ (39), ಮನೀಶ್ ಎಸ್ (34), ಅಬ್ದುಲ್ ರಹಿಮಾನ್(38), ಕೆ ಅಝೀಜ್ (48)

ಪುತ್ತೂರು ಗ್ರಾಮಾಂತರ: ಕಿಶೋರ್ (34), ರಾಕೇಶ್ ಕೆ. (30) ನಿಶಾಂತ್ ಕುಮಾರ್(22)

ಕಡಬ ಠಾಣೆ : ಮಹಮ್ಮದ್ ನವಾಝ್(32 )

ಉಪ್ಪಿನಂಗಡಿ ಠಾಣೆ: ಸಂತೋಷ್ ಕುಮಾರ್ ರೈ ಅಲಿಯಾಸ್ ಸಂತು(35), ಜಯರಾಮ(25), ಸಂಶುದ್ದೀನ್(36), ಸಂದೀಪ(24), ಮಹಮ್ಮದ್ ಶಾಕಿರ್(35), ಅಬ್ದುಲ್ ಅಝೀಜ್ ಅಲಿಯಾಸ್ ಕರಾಯ ಅಝೀಜ್(36 )

ಸುಳ್ಯ ಠಾಣೆ : ಲತೇಶ್ ಗುಂಡ್ಯ(32), ಮನೋಹರ ಅಲಿಯಾಸ್ ಮನು(32)

ಬೆಳ್ಳಾರೆ ಠಾಣೆ: ಪ್ರಸಾದ್(35), ಶಮೀರ್ ಕೆ(38)

ಚಿಕ್ಕಮಗಳೂರಿನಲ್ಲಿ 4 ಮಂದಿ ಗಡೀಪಾರಿಗೆ ಆದೇಶ
ನರಸಿಂಹರಾಜಪುರ ತಾಲೂಕಿನ ಮೂವರು ಮತ್ತು ತರೀಕೆರೆ ತಾಲೂಕಿನ ಓರ್ವ ಸಹಿತ ಜಿಲ್ಲೆಯಲ್ಲಿ 4 ಮಂದಿಯನ್ನು ಗಡೀಪಾರು ಮಾಡಲು ಜಿಲ್ಲಾಧಿಕಾರಿ ಸಿ.ಎನ್‌. ಮೀನಾ ನಾಗರಾಜ್‌ ಆದೇಶ ಹೊರಡಿಸಿದ್ದಾರೆ. ನರಸಿಂಹರಾಜಪುರ ತಾಲೂಕಿನ ಹಿಳುವಳ್ಳಿ ಇಂದಿರಾ ನಗರದ ಫೈಜುಲ್ಲಾ ಷರೀಫ್‌, ಮೇಗರಮಕ್ಕಿ ಕಿಚ್ಚಬ್ಬಿ ಪ್ರದೀಪ್‌, ನೇಮನಹಳ್ಳಿಯ ಮನೋ ರಂಜನ್‌ ಮತ್ತು ತರೀಕೆರೆ ತಾಲೂಕಿನ ಎಂ.ಸಿ. ಹಳ್ಳಿ ಮೌಂಟ್‌ಬ್ಯಾಟನ್‌ ಅವರನ್ನು ಜಿಲ್ಲೆಯಿಂದ ಗಡೀಪಾರಿಗೆ ಆದೇಶಿಸ ಲಾಗಿದೆ. ಅವರ ಮೇಲೆ ಸುಮಾರು 5ರಿಂದ 8 ಪ್ರಕರಣಗಳು ದಾಖಲಾಗಿದ್ದು, ಇವರು ಅಶಾಂತಿ ಮೂಡಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಅಧಿಕಾರಿಗಳ ವರದಿ ಆಧಾರದ ಮೇಲೆ ಗಡೀಪಾರಿಗೆ ಆದೇಶಿಸಿದೆ. ಇವರು ಗಡಿಪಾರಾದರೆ ಸುಮಾರು 6 ರಿಂದ 8 ತಿಂಗಳ ಕಾಲ ಜಿಲ್ಲೆಗೆ ಬರುವಂತಿಲ್ಲ

Leave a Reply

Your email address will not be published. Required fields are marked *

Join WhatsApp Group
error: Content is protected !!