ಕೇರಳ ಭಾಗದಿಂದ ಕದ್ದು ಕಂಟೈನರ್‌ನಲ್ಲಿ ಕೂಡಿಹಾಕಿ ಅಕ್ರಮವಾಗಿ ಸಾಗಿ ಸು ತ್ತಿದ್ದ 24 ದನ ಗಳನ್ನು ರಕ್ಷಿಸಿರುವ ಸಿಸಿಬಿ ಪೊಲೀಸರು ಕಂಟೈನರ್‌ ಲಾರಿ ಯನ್ನು ವಶಕ್ಕೆ ತೆಗೆದು ಕೊಂಡು, ಆರೋಪಿ ಚಾಲಕ ಉತ್ತರ ಪ್ರದೇಶ ಮುಜಾಫರ್‌ ನಗರದ ಆಸಿಫ್‌ (25) ಎಂಬಾತನನ್ನು ಬಂಧಿಸಿದ್ದಾರೆ.

ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

ನೂತನ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಅವರಿಗೆ ಬಂದ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಪಿಎಸ್‌ ಐ. ಶರಣಪ್ಪ ಭಂಡಾರಿ ನೇತೃತ್ವದ ತಂಡ ಜು. 1ರ ನಸುಕಿನ ಜಾವ ತಲಪಾಡಿ ಟೋಲ್‌ ಗೇಟ್‌ ಬಳಿ ಕಾರ್ಯಾಚರಣೆ ನಡೆಸಿತ್ತು. ದನಗಳನ್ನು ಕೇರಳದಿಂದ ಕಳವುಗೈದು ಸಾಗಿಸುತ್ತಿರುವುದಾಗಿ ಆರೋಪಿ ತಿಳಿಸಿದ್ದಾನೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!