ಪುತ್ತೂರು :ಇಲ್ಲಿನ ದರ್ಬೆ ಮುಖ್ಯ ರಸ್ತೆಯ ಸಮೀಪದ ವಾಣಿಜ್ಯ ಸಂಕೀರ್ಣವೊಂದರ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ‘ನಂದಿ ಕೇಶ್ವರ ಇಲೆಕ್ಟ್ರಿಕಲ್ಸ್’ ಸಂಸ್ಥೆಯ ಸರ್ವಿಸ್ ವಿಭಾಗದಲ್ಲಿ ಜೂನ್. 17 ರಂದು  ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅವಘಢ ಸಂಭವಿಸಿದೆ.
ಘಟನೆಯ ವಿವರ:
ಬೆದ್ರಳಾ ನಿವಾಸಿ ಕೇಶವ ಬೆದ್ರಾಳ ಅವರ ಮಾಲಕತ್ವದ ಈ ಸಂಸ್ಥೆಯು ದರ್ಬೆ ಮುಖ್ಯ ರಸ್ತೆಯಲ್ಲಿರುವ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಮಧ್ಯಾಹ್ನದ ವೇಳೆ ಬೆಂಕಿ ಆಕಸ್ಮಿಕ ಸಂಭವಿಸಿದೆ ಎನ್ನಲಾಗಿದ್ದು ತಕ್ಷಣ ಅಂಗಡಿಯ ಸಿಬ್ಬಂದಿ ಇದನ್ನು ಗಮನಿಸಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ತ್ವರಿತ ಕಾರ್ಯಾಚರಣೆ:
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ,   ಕಾರ್ಯಾಚರಣೆ ನಡೆಸಿದ್ದು  ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ದಟ್ಟ ಹೊಗೆ ಮತ್ತು ಕಿರಿದಾದ ಜಾಗದಿಂದಾಗಿ ಆರಂಭದಲ್ಲಿ ಕಾರ್ಯಾಚರಣೆಗೆ ಸವಾಲು ಎದುರಾಗಿತ್ತು.  ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ . ನಷ್ಟದ ನಿಖರ ಮೌಲ್ಯ ಇನ್ನಷ್ಟೇ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!