ʼಸೋದರʼ ಖತರ್ ಮೇಲೆ ದಾಳಿ ನಡೆಸಿಲ್ಲ, ಅಮೆರಿಕದ ವಾಯುನೆಲೆಯಷ್ಟೇ ನಮ್ಮ ಗುರಿ ಎಂದು ಇರಾನ್ ಹೇಳಿದೆ. ಖತರ್ ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯ ಮೇಲೆ ದಾಳಿ ಮಾಡಿದ ಬಳಿಕ ಈ ಹೇಳಿಕೆ ಬಂದಿದೆ ಎಂದು Aljazeera ವರದಿ ಮಾಡಿದೆ.

ಇರಾನ್ ಕ್ಷಿಪಣಿ ದಾಳಿ ಮಾಡಿದ ಅಲ್ ಉದೈದ್ ವಾಯುನೆಲೆಯು ಖತರ್ ನ ವಸತಿ ಪ್ರದೇಶಗಳಿಂದ ದೂರದಲ್ಲಿತ್ತು ಎಂದು ಇರಾನ್ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿದೆ.

ಈ ಕ್ರಮವು ಸ್ನೇಹಪರ ಮತ್ತು ಸಹೋದರ ರಾಷ್ಟ್ರವಾದ ಖತರ್ ಮತ್ತು ಅದರ ಪ್ರಜೆಗಳಿಗೆ ಯಾವುದೇ ಅಪಾಯವನ್ನು ಒಡ್ಡುವುದಿಲ್ಲ. ಇಸ್ಲಾಮಿಕ್ ಗಣರಾಜ್ಯವಾದ ಇರಾನ್, ಖತಾರ್ನೊಂದಿಗೆ ಐತಿಹಾಸಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು, ಮತ್ತು ಅದನ್ನು ಮುಂದುವರಿಸಲು ಬದ್ಧವಾಗಿದೆ” ಎಂದು ಇರಾನ್ ಹೇಳಿಕೆಯಲ್ಲಿ ತಿಳಿಸಿದೆ.

ಈ ದಾಳಿಯನ್ನು ಖಂಡಿಸಿರುವ ಖತರ್, ಇದು ತನ್ನ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!