
ಮಂಜನಾಡಿ: ಜೂ 26: ಸಮಸ್ತ ಕೇರಳಾ ಸುನ್ನೀ ಜಂಇಯ್ಯತ್ತುಲ್ ಉಲಮಾ ಇದರ 100ನೇ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಅಲ್ ಮದೀನಾ ಮಂಜನಾಡಿ ಸಂಸ್ಥೆ ಯಲ್ಲಿ ಜೂನ್ 26 ರಂದು ಧ್ವಜಾರೋಹಣ ನಡೆಸಲಾಯಿತು. ಸಂಸ್ಥೆಯ ಸಾರಥಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಸುಪುತ್ರ, ಅಲ್ ಮದೀನಾ ಪ್ರ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಉಸ್ತಾದ್ ಧ್ವಜಾರೋಹಣ ನಡೆಸಿದರು. ದ’ಅವಾ ಕಾಲೇಜು ಡೈರೆಕ್ಟರ್ ಅಸ್ಸಯ್ಯಿದ್ ಉವೈಸ್ ಅಸ್ಸಖಾಫ್ ಅಲ್ ವಾರಿಸ್ ರವರು ದುಆ ಗೈದರು, ಶರೀಅತ್ ಕಾಲೇಜು ಪ್ರಾಂಶುಪಾಲರಾದ ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದ್ ಮತ್ತು ಅಲ್ ಮದೀನಾ ವುಮೆನ್ಸ್ ಶರೀಅತ್ ಕಾಲೇಜು ಪ್ರಾಂಶುಪಾಲರಾದ ಮುನೀರ್ ಅಹ್ಮದ್ ಸಖಾಫಿ ಅಲ್ ಕಾಮಿಲ್ ಉಸ್ತಾದ್ ರವರು ಮಾತನಾಡಿದರು.
ಸಂಸ್ಥೆಯ ಎಲ್ಲಾವಿಭಾಗದ ಉಸ್ತಾದರುಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ವಿದ್ಯಾರ್ಥಿ ಸಂಘಟನೆ ಬಿಷಾರತುಲ್ ಮದೀನಾದ ಅಧ್ಯಕ್ಷರಾದ ಲುಕ್ಮಾನ್ ಮದನಿನಗರ ವಂದಿಸಿದರು.






